ಸುಳ್ಯದಲ್ಲಿ ವಿಕಲ ಚೇತನರ ಸಮನ್ವಯ ಸಭೆ ಮತ್ತು ಮಾಹಿತಿ ಕಾರ್ಯಗಾರ

0

ಸುಳ್ಯ ನಗರ ಪಂಚಾಯತ್ ವತಿಯಿಂದ ಇಂದು ನಗರದ ಪುರಭವನದಲ್ಲಿ ವಿಕಲ ಚೇತನರ ಸಮನ್ವಯ ಸಭೆ ಮತ್ತು ಮಾಹಿತಿ ಕಾರ್ಯಗಾರ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ವಿಕಲ ಚೇತನರ ಕಾರ್ಯಕರ್ತರ ಪರವಾಗಿ, ಪೆನ್ಷನ್ ಜಾಸ್ತಿ ಮಾಡಲು ಗೌರವ ಧನ ಜಾಸ್ತಿ ಮಾಡಲು, ಈಗಾಗಲೇ ವಿಧಾನ ಸಭೆ ಯಲ್ಲಿ ಮಾತಾಡಿದ್ದೇನೆ, ಮುಂದೆಯೂ ಅವರ ಧ್ವನಿಯಾಗಿ ಇರುತ್ತೇನೆ ಎಂದರು.

ತಹಶೀಲ್ದಾರ್, ಮತ್ತು ನಗರ ಪಂಚಾಯತ್ ಆಡಳಿತ ಅಧಿಕಾರಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಪರಮೇಶ್ವರ್, ದಕ್ಷಿಣ ಕನ್ನಡ ಅಂಗವಿಕಲ ರ ಕಲ್ಯಾಣ ಅಧಿಕಾರಿ ಭಾಸ್ಕರ್ ಜೆ., ಸಿಡಿಪಿಓ, ಶೈಲಜಾ, ತಾಲೂಕು ವೈದ್ಯಾಧಿಕಾರಿ ನಂದಕುಮಾರ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಪ್ಪ ಗೌಡ ಮತ್ತು ನಗರ ವಿಕಲ ಚೇತನರ ಮೇಲ್ವಿಚಾರಕ ಪ್ರವೀಣ್ ನಾಯಕ್, ವಿಕಲ ಚೇತನರಿಗೆ ಸರ್ಕಾರ ದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ನಗರ ಪಂಚಾಯತ್ ಸದಸ್ಯರುಗಳಾದ ಉಮ್ಮರ್, ಶರೀಫ್ ಕಂಠಿ, ಮುದ್ದು ನಾಯ್ಕ್, ಶಿಲ್ಪಾ ಸುದೇವ್, ಸುಧಾಕರ್, ಶಶಿಕಲಾ, ಡೇವಿಡ್ ಕ್ರ್ಯಾಸ್ತಾ, ಸರೋಜಿನಿ ಪೆಳ್ತಡ್ಕ, ಬಾಲಕೃಷ್ಣ ರೈ, ನಗರ ಪಂಚಾಯತ್ ಸಮುದಾಯದ, ಸಂಘಟನಾ ಅಧಿಕಾರಿ ಜಯಲಕ್ಷ್ಮಿ, ಸುಳ್ಯ ಎಂ ರ್ ಡಬ್ಲ್ಯೂ ಚಂದ್ರ ಶೇಖರ್ ಮತ್ತು ಕೆನರಾ ಬ್ಯಾಂಕ್ ಆಪ್ತ ಸಮಾಲೋಚಕಿ ಸುಜಾತಾ ಬ್ಯಾಂಕ್ ಅಕೌಂಟ್ ಗಳ ಬಗ್ಗೆ ಮಾಹಿತಿ ನೀಡಿದರು,

ಲೀಡ್ ಬ್ಯಾಂಕ್ ಅಧಿಕಾರಿ ಸೌಮ್ಯ ಬ್ಯಾಂಕ್ ಲೋನ್ ಗಳ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕ್ ಮ್ಯಾನೇಜರ್ ರಣವೀರ್ ಮೊದಲಾದವರು ವೇದಿಕೆಯಲ್ಲಿದ್ದರು,ಜಯಲಕ್ಷ್ಮಿ ಸ್ವಾಗತಿಸಿದರು, ಪ್ರವೀಣ್ ನಾಯಕ್ ಪ್ರಾಸ್ತಾವಿಕ ಭಾಷಣ ಮಾಡಿದರು. ವಿ ರ್ ಡಬ್ಲ್ಯೂ ರಂಜಿನಿ ಪ್ರಾರ್ಥನೆ ಮಾಡಿದರು, ತೀರ್ಥ ವಂದಿಸಿದರು. ಹಲವಾರು ಜನರಿಗೆ ಪೋಷಣಾ ಭತ್ಯೆ ಚೆಕ್ ವಿತರಿಸಲಾಯಿತು ಮತ್ತು ಉಳಿದರಿಗೆ ಅಕೌಂಟ್ ಗೆ ಹಾಕಲಾಯಿತು.