ದೇವರಕೊಲ್ಲಿ : ಬಾಲ ಸಂಸ್ಕಾರ ಶಿಬಿರದ ಸಮಾರೋಪ

0

ಶ್ರೀ ಚಾಮುಂಡೇಶ್ವರಿ ದೇವಸ್ಥಾನ ದೇವರಕೊಲ್ಲಿ ಹಾಗೂ ನಿವೃತ್ತ ಅಧ್ಯಾಪಕರಾದ ಶಿವರಾವ್ ಎಂ ಎಸ್ ನೇತೃತ್ವದ ಬಾಲ ಸಂಸ್ಕಾರ ಶಿಕ್ಷಣ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಬಾಲ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಕಳೆದ ಹನ್ನೆರಡು ವಾರಗಳಿಂದ ಪ್ರತಿ ಭಾನುವಾರ, ದೇವರಕೊಲ್ಲಿ, ಮದೆ, 2ನೇ ಮೊಣ್ಣಂಗೇರಿ, ಜೋಡುಪಾಲ, ಕೊಯನಾಡು ಭಾಗದ 60 ಮಕ್ಕಳಿಗೆ ಹಿಂದೂ ಧರ್ಮದ ಸಂಸ್ಕಾರ ಆಚಾರ ವಿಚಾರ, ಶ್ಲೋಕಗಳು, ಯೋಗ, ದೇಶ ಭಕ್ತಿಗೀತೆ, ಹಾಗೂ ಬುದ್ದಿಯನ್ನು ಚುರುಕುಗೊಳಿಸುವ ಆಟಗಳನ್ನು ಶಿಬಿರದ ಗುರುಗಳಾದ 2ನೇ ಮೊಣ್ಣಂಗೇರಿ ಗ್ರಾಮದ ಧನಂಜಯ ಅಗೋಳಿಕಜೆ, ವಿಠಲ ಎ ಎ, ಹಾಗೂ ಶ್ರೀಮತಿ ಗೀತಾ ಕೆ ವಿ ಇವರುಗಳು ಶಿಬಿರವನ್ನು ನಡೆಸಿದ್ದರು.

ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಯಶೋಧರ ಬಿ ಜೆ ರವರು ವಹಿಸಿದರು. ಮುಖ್ಯ ಅಥಿತಿಗಳಾಗಿ ಮಾತನಾಡಿದ ಸೇವಾಭಾರತಿ ಕೊಡಗು ಇದರ ಪ್ರಮುಖರಾದ ತಮ್ಮಪ್ಪ ಡಿ ಹೆಚ್ ರವರು ಶಾಲಾ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಮೈಗೂಡಿಸಿಕೊಳ್ಳುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾದ್ಯ ಎಲ್ಲಾ ಗ್ರಾಮಗಳಲ್ಲಿಯೂ ಇಂತಹ ಶಿಬಿರಗಳು ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಶ್ರೀಮತಿ ಕಳಗಿ ರಮಾದೇವಿ ಸಂಪಾಜೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸಮಿತಿಯವರು ಉಪಸ್ಥಿತರಿದ್ದರು. ಧನಂಜಯ ಅಗೋಳಿಕಜೆ ಸ್ವಾಗತಿಸಿ, ವಿಠಲ ರಾಮಕೊಲ್ಲಿ ನಿರೂಪಿಸಿ, ಶ್ರೀಮತಿ ಗೀತಾ ಕೆ ವಿ ವಂದಿಸಿದರು.