ಮಾ.2ರಂದು ಅರಂತೋಡು ಗ್ರಾಮದ ಪ್ರಶಾಂತ್ ಮತ್ತು ತರಣ್ ರವರು ಚರಣ್ ರಾಜ್ ರವರ ಟಿಪ್ಪರ್ ಲಾರಿಯಲ್ಲಿ ಮತ್ತು ಸುಳ್ಯದ ಸುನಿಲ್ ರವರು ಅರಂತೋಡು ಗ್ರಾಮದ ಎಳ್ಪಕಜೆ ಎಂಬಲ್ಲಿ ಪಯಸ್ವಿನಿ ನದಿಯಿಂದ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳನ್ನು ಸಾಗಾಟ ಮಾಡಲು ಯತ್ನಿಸಿದಾಗ ಸುಳ್ಯ ಪೋಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಪ್ರಶಾಂತ್ ರನ್ನು ವಶಕ್ಕೆ ಪಡೆದರು. ಇತರರು ಪರಾರಿಯಾದರು.
ಮಾ.5ರಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಂ.ಎನ್.ಸಿ. ನ್ಯಾಯಾಲಯವು ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಆರೋಪಿ ಪರವಾಗಿ ವಕೀಲರಾದ ಎಸ್.ಕೆ. ವಿನಯ ಸೋಣಂಗೇರಿ ಹಾಗೂ ರಾಮಚಂದ್ರ ಶ್ರೀಪಾದರವರು ವಾದಿಸಿದ್ದರು.