ನಾರ್ಕೋಡಿನ ವ್ಯಕ್ತಿಯ ಅಪಹರಣವಲ್ಲ – ನಿರಾಶ್ರಿತ ಕೇಂದ್ರಕ್ಕೆ ರವಾನೆ

0

ಸುಳ್ಯಕ್ಕೆಂದು ಬಂದಿದ್ದ ನಾರ್ಕೋಡಿನ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಅವರ ಮಗ ನೀಡಿದ ಅಪಹರಣ ದೂರನ್ನು ವಿಚಾರಣೆ ನಡೆಸಿದ ಪೋಲೀಸರು, ಅದು ಅಪಹರಣವಲ್ಲ – ನಿರಾಶ್ರಿತ ಕೇಂದ್ರಕ್ಕೆ ರವಾನೆ ಎಂದು ತಿಳಿಸಿದ್ದಾರೆ.

ಆಲೆಟ್ಟಿ ಗ್ರಾಮ ನಾರ್ಕೋಡಿನ ಮೋನಪ್ಪ ಗೌಡ (60 ವರ್ಷ) ಎಂಬವರು ಸೋಮವಾರ ಸುಳ್ಯಕ್ಕೆಂದು ಬಂದವರು ವಾಪಸ್ ಮನೆಗೆ ಮರಳಿರಲಿಲ್ಲ. ಇವರನ್ನು ಯಾರೋ ಅಪರಿಚಿತರು ಸುಳ್ಯದಿಂದ ಟಿಟಿ ವಾಹನದಲ್ಲಿ ಮಂಗಳೂರಿನತ್ತ ಕರೆದುಕೊಂಡು ಹೋಗಿದ್ದಾರೆಂಬ ಮಾಹಿತಿ ದೊರೆತಹಿನ್ನೆಲೆಯಲ್ಲಿ
ಅವರ ಮಗ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ನೀಡಿದ್ದರು.

ಘಟನೆಗೆ ಸಂಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ನಿಜವಾದ ಸಂಗತಿ ತಿಳಿದು ಬಂದಿದೆ.

ಈ ವ್ಯಕ್ತಿಯು ಕಳೆದ ಹಲವಾರು ಸಮಯಗಳಿಂದ ಸುಳ್ಯದಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಬಸ್ ನಿಲ್ದಾಣದಲ್ಲಿ ತಂಗುತ್ತಿದ್ದರೆನ್ನಲಾಗಿದೆ. ಇದರ ಬಗ್ಗೆ ಸಾರ್ವಜನಿಕರು ಮಂಗಳೂರು ನಿರಾಶ್ರಿತ ಕೇಂದ್ರಕ್ಕೆ ಮಾಹಿತಿ ನೀಡಿದ ಮೇರೆಗೆ ಮಂಗಳೂರು ಪಚ್ಚನಾಡಿಯ ನಿರಾಶ್ರಿತ ಕೇಂದ್ರದಿಂದ ಬಂದ ಸಿಬ್ಬಂದಿಗಳು ಅವರನ್ನು ಸುಳ್ಯ ಬಸ್ ನಿಲ್ದಾಣ ಬಳಿಯಿಂದ ಕರೆದುಕೊಂಡು ಹೋಗಿದ್ದಾರೆಂದು ತಿಳಿಯಿತೆನ್ನಲಾಗಿದೆ.
ಬಳಿಕ ಪೋಲೀಸರು ಮಂಗಳೂರು ಪಚ್ಚನಾಡಿಯ ನಿರಾಶ್ರಿತ ಕೇಂದ್ರವನ್ನು ಸಂಪರ್ಕಿಸಿ ವಿಚಾರಿಸಿದಾಗ ಮೋನಪ್ಪ ಗೌಡರು ಅಲ್ಲಿರುವುದು ದೃಢಪಟ್ಟಿತೆಂದು ತಿಳಿದುಬಂದಿದೆ.