ಸೇತುವೆ ಬಳಿ ಎರಡು ರಸ್ತೆ ಮಧ್ಯೆ ಇನ್ನೂ ಮುಚ್ಚದ ಚರಂಡಿ
ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕಡೆಪಾಲ ಸೇತುವೆ ಬಳಿ ರಸ್ತೆ ಅಗಲೀಕರಣ ಕಾಮಗಾರಿ ನಡೆದು, ರಸ್ತೆ ಮರು ಡಾಮರೀಕರಣ ನಡೆದಿದ್ದರೂ ಎರಡೂ ರಸ್ತೆಯ ಮಧ್ಯೆ ಭಾಗದಲ್ಲಿ ಚರಂಡಿಯನ್ನು ಮುಚ್ಚದೇ ಇದ್ದುದರಿಂದ ಇದೀಗ ಸೇತುವೆಯ ಬಳಿ ಮತ್ತೆ ಅಪಾಯದ ಸ್ಥಿತಿ ನಿರ್ಮಾಣಗೊಂಡಿದೆ.
ಸೇತುವೆಯ ಬಳಿ ಹಳೆಯ ರಸ್ತೆ ಹಾಗೂ ಹೊಸ ರಸ್ತೆಯ ಮಧ್ಯ ಭಾಗದಲ್ಲಿ ಚರಂಡಿ ಇದ್ದು, ಇಲ್ಲಿ ಯಾವ ರಸ್ತೆಯಲ್ಲಿ ಬರಬೇಕು ಎಂಬುದು ಕೆಲ ವಾಹನ ಚಾಲಕರಿಗೆ ಗೊಂದಲ ನಿರ್ಮಾಣ ಉಂಟು ಮಾಡುತ್ತಿದೆ. ಇದು ರಾಷ್ಟ್ರೀಯ ಹೆದ್ದಾರಿ ರಸ್ತೆಯಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಅತೀ ವೇಗವಾಗಿ ಚಲಿಸುತ್ತಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ.
ಮೊದಲೇ ಕಡೆಪಾಲದ ಈ ಪ್ರದೇಶ ವಾಹನ ಅಪಘಾತದ ತಾಣವಾಗಿದ್ದು, ಸೇತುವೆ ಬಳಿ ಎರಡೂ ರಸ್ತೆಯ ಮಧ್ಯೆ ಚರಂಡಿ ಇದ್ದು, ಹಳೆಯ ರಸ್ತೆಯನ್ನು ಮುಚ್ಚಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.