ನಾಗಪಟ್ಟಣ ಸದಾಶಿವ ದೇವಸ್ಥಾನದ ವಾರ್ಷಿಕ ಮಹೋತ್ಸವ ಆರಂಭ

0

ಆಲೆಟ್ಟಿ ಗ್ರಾಮದ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಇಂದಿನಿಂದ ಮೊದಲ್ಗೊಂಡು ಮೂರು ದಿನಗಳ ಕಾಲ ವೇದಮೂರ್ತಿ ಬ್ರಹ್ಮಶ್ರೀ ಆರೋತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.

ಇಂದು ಪೂರ್ವಾಹ್ನ ಅರ್ಚಕರ ನೇತೃತ್ವದಲ್ಲಿ ಉಷಾಪೂಜೆಯಾಗಿ ಗಣಪತಿ ಹವನವಾಗಿ ಉಗ್ರಾಣ ತುಂಬುವುದು. ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ಶಾಸ್ತಾವೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ, ಸಂಜೆ ತಂತ್ರಿಯವರ ಆಗಮನವಾಗಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ,ಪ್ರಾಸಾದ ಶುದ್ಧಿ,ರಕ್ಷೋಘ್ನ ಹೋಮ, ವಾಸ್ತು ಹೋಮ,ವಾಸ್ತು ಬಲಿ, ವಾಸ್ತು ಕಲಶಾಭಿಷೇಕ ನಂತರ ಪೂಜೆಯಾಗಿ ಅನ್ನ ಸಂತರ್ಪಣೆ ನಡೆಯಲಿದೆ.


ರಾತ್ರಿ ಗಂಟೆ 8.00 ರಿಂದ ಧಾರ್ಮಿಕ ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶಾಸಕಿ‌ ಕು.ಭಾಗೀರಥಿ ಮುರುಳ್ಯ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿರುವರು.


ಸಂಜೆ ಸ್ಥಳೀಯ ಬಾಲ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ, ಶ್ಯಾಮ್ ಕಲ್ಲಡ್ಕ ಬಂಟ್ವಾಳ ಇವರಿಂದ ಮಾಯಾಲೋಕ ಬಳಿಕ ನಾಗಪಟ್ಟಣ ಪರಿಸರದ ಯುವಕ ಯುವತಿಯರಿಂದ ನಾಟ್ಯ ವೈಭವ, ನೃತ್ಯ ರೂಪಕ‌ ಪ್ರದರ್ಶನ ವಾಗಲಿರುವುದು.