ರಂಗಮಯೂರಿ ಕಲಾಶಾಲೆಯ ಬಹು ನಿರೀಕ್ಷಿತ ಮಕ್ಕಳ ರಾಜ್ಯಮಟ್ಟದ ಬೇಸಿಗೆ ಶಿಬಿರ “ಬಣ್ಣ-2024”
ಏಪ್ರಿಲ್ 9 ರಿಂದ 17 ರ ವರೆಗೆ ಸುಳ್ಯದ ಕಾಯರ್ತೋಡಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಮಕ್ಕಳ ಕನಸು ನನಸಾಗಿಸುವ ವೇದಿಕೆಯಲ್ಲಿ ಮಕ್ಕಳ ಪ್ರಪಂಚದಲ್ಲಿ ಕಲೆ, ಸಾಹಿತ್ಯಕ್ಕೆ ಒತ್ತು ನೀಡಿ, ಬಣ್ಣ ಬಣ್ಣದ ರೆಕ್ಕೆಯನ್ನು ಕಟ್ಟಿ ಉತ್ತುಂಗಕ್ಕೆ ಏರಿಸುವ ಕಾರ್ಯ ಮಾಡಿಸುತ್ತಿರುವುದು, ಕಳೆದ ಐದು ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ.
ಬೇಸಿಗೆ ಶಿಬಿರ ‘ಬಣ್ಣ – 2024’ರಲ್ಲಿ ದೇಸೀಯ ಕಲೆಗಳ ಅನಾವರಣದೊಂದಿಗೆ ಮಕ್ಕಳ ಕನಸಿನ ‘ಬಣ್ಣ’ ಸಜ್ಜಾಗುತ್ತಿದೆ. ರಂಗ ತರಬೇತಿ, ನಾಟಕ ರಚನೆ – ನಿರ್ಮಾಣ, ಜನಪದ ಹಾಡು, ನೃತ್ಯ, ದೇಸೀ ಆಟ, ದೇಸೀ ವಸ್ತುಗಳ ತಯಾರಿಕೆ, ಪ್ರಾತ್ಯಕ್ಷಿಕೆ ಇತ್ಯಾದಿ ವಿಭಿನ್ನ ಚಟುವಟಿಕೆಗಳ ಜೊತೆಗೆ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು, ರಂಗಮಯೂರಿ ಶಿಕ್ಷಕರು, ವ್ಯವಸ್ಥಾಪಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಜೊತೆಗಿರುತ್ತಾರೆ. ಏಳರಿಂದ ಹದಿನೇಳು (07-17) ವರ್ಷ ವಯೋಮಿತಿಯ ವಿದ್ಯಾರ್ಥಿಗಳಿಗೆ ರಂಗಮಯೂರಿ ಕಲಾಶಾಲೆಯು ನಡೆಸುತ್ತಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವಂತೆ, ಕಾರ್ಯಕ್ರಮದ ಆಯೋಜಕರು ಹಾಗೂ ನಿರ್ದೇಶಕರಾಗಿರುವ ಲೋಕೇಶ್ ಊರುಬೈಲ್ ತಿಳಿಸಿದ್ದಾರೆ.
ಏಪ್ರಿಲ್ 9 ರಿಂದ 17 ರವರೆಗೆ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ಆವರಣದಲ್ಲಿ ನಡೆಯಲಿರುವ ಶಿಬಿರದ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಏಪ್ರಿಲ್ 07ರ ಒಳಗಾಗಿ, ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬಹುದಾಗಿ ತಿಳಿಸಲಾಗಿದೆ.
ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ : 9611355496 , 6363783983