ಕಲ್ಮಡ್ಕ ಗ್ರಾಮ ಪಂಚಾಯತ್ ವತಿಯಿಂದ ಸಹಾಯಧನವಾಗಿ ಚೆಕ್ ವಿತರಣೆ

0

ಕಲ್ಮಡ್ಕ ಗ್ರಾಮ ಪಂಚಾಯತ್ ವತಿಯಿಂದ ಮಾ. 16 ರಂದು ಗ್ರಾಮ ಪಂಚಾಯತ್ ಸ್ವಂತ ನಿಧಿ ಶೇ 5 ವಿಕಲಚೇತನ ಅನುದಾನದಲ್ಲಿ ಅಬೀದಾ ಎಂ ಮುಚ್ಚಿಲ ರವರಿಗೆ ಔಷಧಿ ವೆಚ್ಚ ಸಹಾಯಧನವಾಗಿ ಚೆಕ್ ನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕೆ.ಎಸ್ ರವರು ಹಸ್ತಾಂತರಿಸಿದರು.

‌ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಆಕ್ರಿಕಟ್ಟೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್ ಸಿ.ಎಂ ಉಪಸ್ಥಿತರಿದ್ದರು.