ಸ್ನೇಹ ಶಾಲೆಯಲ್ಲಿ ಪರಿಸರ, ಹಾವು ಮತ್ತು ನಾವು ಕಾರ್ಯಕ್ರಮ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಪರಿಸರ ಹಾವು ಮತ್ತು ನಾವು ಕಾರ್ಯಕ್ರಮ ಮಾ. 19 ರಂದು ಜರುಗಿತು.


ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಪ್ರಮಾಣಿಕೃತ ಉರಗ ಸಂರಕ್ಷಕರಾಗಿರುವ ಸುರೇಶ್ ಸಿ.ಆರ್ ಇವರು ಹಾವುಗಳ ಉಳಿವು ಮತ್ತು ಅಳಿವಿನ ಬಗ್ಗೆ ಮಾತನಾಡಿ,
ಹಾವುಗಳ ಬಗ್ಗೆ ಇರುವ ಮೂಢನಂಬಿಕೆಗಳಿಂದ ಹೊರ ಬರಬೇಕಾದ ಹಾಗೂ ಹಾವುಗಳ ಸಂರಕ್ಷಣೆಗೆ ಮಹತ್ವ ನೀಡಬೇಕಾದ ಅನಿವಾರ್ಯತೆಯನ್ನು ತಿಳಿಸಿಕೊಟ್ಟರು. “ಮಾನವನಿಗೆ ಬದುಕುವ ಹಕ್ಕು ಇರುವಂತೆ ಹಾವುಗಳು ಕೂಡ ಬದುಕಬೇಕು.
ಅವುಗಳಿಗೆ ಅಪಾಯ ಉಂಟಾದಾಗ ತನ್ನ ರಕ್ಷಣೆಗಾಗಿ ಕಚ್ಚುವ ಸಾಧ್ಯತೆಗಳಿವೆ.
ಮಾನವನ ಅತಿಕ್ರಮಣ ಬುದ್ಧಿಯಿಂದಾಗಿ ಅದೆಷ್ಟೋ ವನ್ಯಜೀವಿಗಳಿಗೆ ನೆಲೆ ಇಲ್ಲದಂತಾಗಿದೆ. ಉರಗಗಳನ್ನು ಸಂರಕ್ಷಿಸುವ ಕೆಲಸ ಪ್ರತಿಯೊಬ್ಬನು ಮಾಡಬೇಕು.
ನಂಬಿಕೆಗಳ ಹೆಸರಿನಲ್ಲಿ ಅವುಗಳ ಜೀವಕ್ಕೆ ಅಪಾಯ ಉಂಟುಮಾಡಬಾರದು.” ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹವ್ಯಾಸಿ ಉರಗ ಸಂರಕ್ಷಕರಾಗಿರುವ ರಮೇಶ್ ಶಿಶಿಲ ಹಾಗೂ ಸಹ್ಯಾದ್ರಿ ಸಂಚಯ ಸಂಘಟನೆಯ ಸದಸ್ಯರಾಗಿರುವ ಅವಿನಾಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರದ ದಾಮ್ಲೆ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ದೇವಿಪ್ರಸಾದ ಜಿ.ಸಿ ಕಾಯರ್ತೋಡಿ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ವಂದಿಸಿದರು.