ಕೋವಿ ತೀರಾ ಅವಶ್ಯವೆಂದಾದಲ್ಲಿ

0

ಮಾ.25 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿ ಕೋವಿ ಹೊಂದಿರುವವರು ತಮ್ಮ ಕೋವಿಗಳನ್ನು ಎ.1 ರ ಒಳಗೆ ಡೆಪಾಸಿಟ್ ಇಡಲು ಆದೇಶ ಮಾಡಿರುವ ಜಿಲ್ಲಾಧಿಕಾರಿಗಳು, ‘ ಈ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅಥವಾ ತಮ್ಮ ಬೆಳೆ ರಕ್ಷಣೆಗೆ ಆಯುಧ ತೀರಾ ಅವಶ್ಯಕತೆಯಿದೆ ಎಂದಾದಲ್ಲಿ 25.3.2024 ರ ಒಳಗೆ ಪೂರಕ ದಾಖಲೆ ಮತ್ತು ಮಾಹಿತಿಯೊಂದಿಗೆ ಜಿಲ್ಲಾ ಸ್ಕ್ರೀನಿಂಗ್ ಕಮಿಟಿಗೆ ಅಹವಾಲು ಸಲ್ಲಿಸಬಹುದಾಗಿದೆ’ ಎಂದು ತಿಳಿಸಿದ್ದಾರೆ.