ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಸಿ ಇ ಟಿ ಮತ್ತು ನೀಟ್ ಕ್ರ್ಯಾಶ್ ಕೋರ್ಸ್ ಪ್ರಾರಂಭೋತ್ಸವಕ್ಕೆ ಚಾಲನೆ

0

ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರಿನ ವಿದ್ಯಾಂತ್ ಅಕಾಡೆಮಿಯವರು ನಡೆಸಲ್ಪಡುವ ಸಿ ಇ ಟಿ ಮತ್ತು ನೀಟ್ ಕ್ರ್ಯಾಶ್ ಕೋರ್ಸ್ ಪ್ರಾರಂಭಗೊಂಡಿತು. ಪ್ರಾರಂಭೋತ್ಸವಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆಯನ್ನು ನೀಡಿದವರು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಚಂದ್ರಶೇಖರ್ ರವರು. ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಬಂಗಾಯರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ದಯಾಮಣಿಕೆ ರವರು ಸ್ವಾಗತಿಸಿ, ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ದ ಕ ಗೌಡ ವಿದ್ಯಾಸಂಘದ ಪ್ರ ದಾನ ಕಾರ್ಯದರ್ಶಿಯವರಾದ ಡಾ. ರೇವತಿ ನಂದನ ರವರು ಹಾಗೂ ದ ಕ ಗೌಡ ವಿದ್ಯಾ ಸಂಘದ ನಿರ್ದೇಶಕರಾದ ಡಾ. ಸಾಯಿಗೀತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾಂತ್ ಅಕಾಡೆಮಿಯ ಸಿ ಇ ಟಿ ತರಬೇತುದಾರರಾದ ವಿನಯ ಕಾಮತ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕರಾದ ದಯಾನಂದ ಓ. ಡಿ ಯವರು ವಂದನಾರ್ಪಣಗೈದರು. ಹಿರಿಯ ಉಪನ್ಯಾಸಕರಾದ ಶ್ರೀಮತಿ ಸ್ವರ್ಣಕಲಾ. ಎ.ಎಸ್ ರವರು ಕಾರ್ಯಕ್ರಮ ನಿರೂಪಿಸಿದರು.