ಆಲೆಟ್ಟಿ ಗ್ರಾಮದ ಕುಡೆಕಲ್ಲು ಮನೆತನದ ತರವಾಡು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.24 ರಿಂದ 26 ರ ತನಕ ವರ್ಪ್ರಂಪ್ರತಿ ಜರುಗುವ ಶ್ರೀ ವಿಷ್ಣುಮೂರ್ತಿ ಹಾಗೂ ಉಪದೈವಗಳ ಕಳಿಯಾಟ ಮಹೋತ್ಸವವು ನಡೆಯಿತು.
ಮಾ.24 ರಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನ, ನಾಗತಂಬಿಲ ಹಾಗೂ ಶ್ರೀ ವೆಂಕಟರಮಣ ದೇವರ ಹರಿಸೇವೆಯು ನಡೆಯಿತು.
ರಾತ್ರಿ ಶ್ರೀ ದೈವದ ಕಳಿಯಾಟಕ್ಕೆ ಕೂಡಿ ಉಗ್ರಾಣ ತುಂಬುವ ಕಾರ್ಯಕ್ರಮ ನಡೆದ ಬಳಿಕ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕೈವೀದ್ ನಡೆದು ಕಲಶ ತರುವ ಕಾರ್ಯಕ್ರಮ ವಾಗಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ಮತ್ತು ಗುರು ಕಾರ್ನೋರು ದೈವದ ಸೇವೆಯು ನಡೆಯಿತು.
ಮಾ.25 ರಂದು ಪೂರ್ವಾಹ್ನ ಶ್ರೀ ಪೊಟ್ಟನ್ ದೈವ, ಅಪರಾಹ್ನ ಶ್ರೀ ರಕ್ತೇಶ್ವರಿ ದೈವದ ಸೇವೆ ನಡೆದು ರಾತ್ರಿ ಶ್ರೀ ವಿಷ್ಣುಮೂರ್ತಿ ದೈವ ,ಶ್ರೀ ಧರ್ಮದೈವ , ಶ್ರೀಪಾಷಾಣಮೂರ್ತಿ ದೈವಗಳ ನರ್ತನ ಸೇವೆಯಾಗಿ ಶ್ರೀ ದೈವದ ಕಲಶ ಹೊರುವ ಕಾರ್ಯಕ್ರಮ ನಡೆಯಿತು.
ನಂತರ ಭಕ್ತಾದಿಗಳಿಂದ ಹರಿಕೆ ಸಮರ್ಪಣೆಯಾಗಿ ಪ್ರಸಾದ ವಿತರಣೆಯಾಯಿತು.
ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಾಯಿತು.