ಸ್ವರ್ಣ ಮಹಿಳಾ ಮಂಡಲ (ರಿ) ಕನಕಮಜಲು ಇದರ ವತಿಯಿಂದ ಮಾರ್ಚ್ 24 ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ ಗಳನ್ನು ಆಯೋಜಿಸಿ, ಗ್ರಾಮದ ಮಹಿಳೆಯರು ಮನೆಯಲ್ಲೇ ತಯಾರಿಸಿದ ಉತ್ಪನ್ನಗಳ ಮಾರಾಟದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಕುಸುಮ ಅಡ್ಕಾರು ಅಧ್ಯಕ್ಷತೆ ವಹಿಸಿದ್ದರು .ಶ್ರೀಮತಿ ನಳಿನಾಕ್ಷಿ ಪಲ್ಲತ್ತಡ್ಕ ಪ್ರಾರ್ಥಿಸಿದರು .ಮುಖ್ಯ ಅತಿಥಿಗಳಾಗಿ ಶ್ರೀಮತಿ ಸರೋಜಿನಿ ದೇಲಂಪಾಡಿ ನಿವೃತ್ತ ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಉದಯಭಾಸ್ಕರ ನಿರ್ವಾಹಕರು ಅಮೃತಗಂಗಾ ಸೇವಾ ಸಂಸ್ಥೆ ಸುಳ್ಯ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ .ಭವ್ಯಾ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರು ಕೆ.ವಿ.ಜಿ.ಮೆಡಿಕಲ್ ಕಾಲೇಜು ಇವರು ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಈ ಹಿಂದೆ ಅಮೃತಗಂಗಾ ಸೇವಾ ಸಂಸ್ಥೆಯ ಅಮೃತ ದೃಷ್ಟಿ ನೇತ್ರದಾನ ಅಭಿಯಾನದ ಮೂಲಕ ನೇತ್ರದಾನದ ಸಂಕಲ್ಪ ಕೈಗೊಂಡ 15 ಸದಸ್ಯರಿಗೆ ಅಧಿಕೃತ ಪ್ರಮಾಣ ಪತ್ರವನ್ನು ಉದಯಭಾಸ್ಕರ ಸುಳ್ಯ ಇವರು ಹಸ್ತಾಂತರಿಸದರು. ಈ ಸಂಧರ್ಭದಲ್ಲಿ ಇಬ್ಬರು ಪ್ರತಿಭಾನ್ವಿತ ವಿಧ್ಯಾರ್ಥಿನಿಯರನ್ನು ಗೌರವಿಸಲಾಯಿತು .ಶ್ರೀಮತಿ ಶುಭಾ ಕಾಳಪಪಜ್ಜನ ಮನೆ ಇವರು ಸ್ವಾಗತಿಸಿ ,ಕಾರ್ಯದರ್ಶಿ ಶ್ರೀಮತಿ ಶ್ಯಾಮಲಾ ಪೆರುಂಬಾರು ವಂದಿಸಿದರು .ಶ್ರೀಮತಿ ಸುಮತಿ ಕುತ್ಯಾಳ ಕಾರ್ಯಕ್ರಮ ನಿರೂಪಣೆ ಮಾಡಿದರು .