ಎಡಮಂಗಲ ಗ್ರಾಮದ ಜಾಲ್ತಾರು ಕೊಲ್ಲರ್ನೂಜಿ ಕುಟುಂಬದ ತರವಾಡು ಮನೆಯಲ್ಲಿ ಕೊಲ್ಲರ್ನೂಜಿ ಕುಟುಂಬಸ್ಥರ ಧರ್ಮದೈವ ಮತ್ತು ಉಪದೈವಗಳ ಧರ್ಮನಡಾವಳಿಯು ಮಾ.24 ಹಾಗೂ ಮಾ.25ರಂದು ಜರುಗಿತು. ಧರ್ಮನಡಾವಳಿಯ ಪ್ರಯುಕ್ತ ಮಾ.24ರಂದು ಬೆಳಗ್ಗೆ ಗಣಹೋಮ ನೆರವೇರಿತು.
ಸಂಜೆ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ಸತ್ಯದೇವತೆ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಧರ್ಮದೈವ ರುದ್ರಚಾಮುಂಡಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಿತು. ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ|ನಾರಾಯಣ ಶೇಡಿಕಜೆಯವರ ಕೃತಿ ‘ಕೊಲ್ಲರ್ನೂಜಿ ಕುಟುಂಬ’ ಇದರ ಬಿಡುಗಡೆ ಕಾರ್ಯಕ್ರಮ ಮತ್ತು ಕುಟುಂಬದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜನಪದ ಸಾಹಿತಿ, ಇತಿಹಾಸಕಾರರಾದ ಆನಂದ ಗೌಡ ಪರ್ಲ, ಎಡಮಂಗಲ ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷರಾದ ರಾಮಕೃಷ್ಣ ರೈ ಮಾಲೆಂಗ್ರಿ ಹಾಗೂ ಎಡಮಂಗಲ ಗ್ರಾ.ಪಂ. ಅಧ್ಯಕ್ಷರಾದ ರಾಮಣ್ಣ ಗೌಡ ಜಾಲ್ತಾರು ಭಾಗವಹಿಸಿದ್ದರು. ಕುಟುಂಬದ ಯಜಮಾನರಾದ ಚಿನ್ನಪ್ಪ ಗೌಡ ಮುಂಡುಗಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಗದೀಶ್ ಮುಂಡುಗಾರು ಸ್ವಾಗತಿಸಿ, ಕು|ಕವಿತಾ ಎಂ.ಎಲ್ ವಂದಿಸಿದರು. ಶ್ರೀಮತಿ ಮಲ್ಲಿಕಾ ಎಂ.ಎಲ್ ಕಾರ್ಯಕ್ರಮ ನಿರೂಪಿಸಿದರು.