ತೊಡಿಕಾನ ಗ್ರಾಮದ ಕುತ್ತಮೊಟ್ಟೆ ಕುಟುಂಬದ ಧರ್ಮದೈವ ಶ್ರೀ ರುದ್ರಚಾಮುಂಡಿ, ಶ್ರೀ ವಿಷ್ಣುಮೂರ್ತಿ , ಶ್ರೀ ಪಾಲಿಸ್ ರಾಯ ಮತ್ತು ಪರಿವಾರ ಸಾನಿಧ್ಯಗಳ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವು ಮಾ.26ರಿಂದ 28ರವರೆಗೆ ಜರುಗಿತು.
ಮಾ.26ರಂದು ಬೆಳಿಗ್ಗೆ ತಂತ್ರಿಗಳ ಆಗಮನ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಗಣಪತಿ ಹೋಮ, ಖನನಾದಿ ಸಪ್ತಶುದ್ಧಿ, ಸಂಜೆ ವಾಸ್ತುಪೂಜೆ, ರಾಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಬಲಿ ನಡೆಯಿತು.
ಮಾ.27ರಂದು ಬೆಳಿಗ್ಗೆ ಗಣಪತಿ ಹೋಮ, ಅನುಜ್ಞಾ ಕಲಶ, ಜೀವಕಲಶ ಪೂಜೆ, ಶಯ್ಯಾ ಪೂಜೆ, ನಾಗಸನ್ನಿಧಿಯಲ್ಲಿ ನವಕ ಕಲಶಾಭಿಷೇಕ, ತಂಬಿಲ, ಆಶ್ಲೇಷ ಬಲಿ, ಸಂಜೆ ದುರ್ಗಾಪೂಜೆ, ಕಲಶಪೂಜೆ, ಅಧಿವಾಸ ಹೋಮ, ಅಧಿವಾಸ ಜರುಗಿತು.
ಮಾ.28ರಂದು ಬೆಳಿಗ್ಗೆ ಗಣಪತಿ ಹೋಮ, ಪರಿವಾರ ದೈವಗಳ ಕಲಶಪೂಜೆ, ಮಿಥುಲ ಲಗ್ನದಲ್ಲಿ ಶ್ರೀ ದೈವಗಳ ಪೀಠ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ, ನಿತ್ಯನಿಯಮ ನಿಶ್ಚಯ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಕುತ್ತಮೊಟ್ಟೆ ಕುಟುಂಬದ ಯಜಮಾನ ಚಿನ್ನಪ್ಪ ಗೌಡ ಕುತ್ತಮೊಟ್ಟೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಖಜಾಂಜಿ ಕರುಣಾಕರ ಕೆ., ಉಪಾಧ್ಯಕ್ಷರುಗಳಾದ ಲಕ್ಷ್ಮೀನಾರಾಯಣ ಕೆ.ಜೆ., ಶಾರದಾ ಕೆ., ಸದಸ್ಯರುಗಳಾದ ಮಹೇಶ್ ಕೆ., ಪ್ರಶಾಂತ್ ಡಿ.ಎಸ್., ತೀರ್ಥರಾಮ ಕೆ., ನವೀನ ಕೆ., ಪವನ್ ಕೆ.ವಿ., ದಯಾನಂದ ಕೆ. ಸೇರಿದಂತೆ ಕುತ್ತಮೊಟ್ಟೆ ಕುಟುಂಬಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಇಲ್ಲಿ ದೈವಗಳ ಧರ್ಮ ನಡಾವಳಿಯು ಮೇ.23 ಮತ್ತು 24ರಂದು ನಡೆಯಲಿದೆ.