ಸುಳ್ಯ ಕೆ.ವಿ.ಜಿ. ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಕನ್ಸರ್ವೇಟಿವ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣಪ್ರಸಾದ್ ಎಲ್, ಪ್ರೋಸ್ತೋಡೊಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಮನೋಜ್ ಕುಮಾರ್ ಎ.ಡಿ ಮತ್ತು ಆರ್ಥೋಡಾಂಟಿಕ್ಸ್ ವಿಭಾಗದ ರೀಡರ್ ಡಾ. ರೇವಂತ್ ಸೂಂತೋಡು ಕರ್ನಾಟಕ ರಾಜ್ಯ ಡೆಂಟಲ್ ಕೌನ್ಸಿಲ್ ಕಮಿಟಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ಕಮಿಟಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ, ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್, ಕೆ.ವಿ.ಜಿ. ಡೆಂಟಲ್ ಕಾಲೇಜಿನ ಸಿ.ಇ.ಒ. ಡಾ. ಉಜ್ವಲ್ ಯು.ಜೆ ಅಭಿನಂದಿಸಿದ್ದಾರೆ.