ಎ.6ರಂದು ದರ್ಶನ ಬಲಿ, ಬಟ್ಟಲು ಕಾಣಿಕೆ
ಅಜ್ಜಾವರ ಗ್ರಾಮದ ಶ್ರೀ ಮಹಿಷಾಮರ್ದಿನೀ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಎ.4ರಿಂದ ಆರಂಭಗೊಳ್ಳಲಿದೆ.
ಮಾ.29ರಂದು ಮುಹೂರ್ತದ ಗೊನೆ ಕಡಿಯಲಾಯಿತು. ಎ.4ರಂದು ಬೆಳಗ್ಗೆ ಉಗ್ರಾಣ ತುಂಬಿಸುವ ಕಾರ್ಯ ನಡೆಯುವುದು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಎ.5ರಂದು ಬೆಳಗ್ಗೆ ನವಕ, ಗಣಹೋಮ. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ. ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಸೌರಭ – ಸ್ಥಳೀಯರಿಂದ ಮತ್ತು ಶಾಲಾ ವಿದ್ಯಾರ್ಥಿಗಳಿಂದ. ರಾತ್ರಿ ಶ್ರೀ ಭೂತಬಲಿ, ದೈವಗಳ ತಂಬಿಲ ಅನ್ನಸಂತರ್ಪಣೆ, ಸಿಡಿಮದ್ದಿನ ಪ್ರದರ್ಶನ. ಎ.6ರಂದು ಬೆಳಗ್ಗೆ ದರ್ಶನ ಬಲಿ – ಬಟ್ಟಲು ಕಾಣಿಕೆ ಗಡಿಪ್ರಸಾದ, ಮಂತ್ರಾಕ್ಷತೆ ಸಂಪ್ರೋಕ್ಷಣೆ ನಡೆಯುವುದು. ಬಳಿಕ ಅನ್ನಸಂತರ್ಪಣೆ. ಎ.8ರಂದು ರಾತ್ರಿ ತೊಡಙಲ್ ನಂತರ ಅನ್ನಸಂತರ್ಪಣೆ. ರಾತ್ರಿಯಿಂದ ಬೆಳಗ್ಗಿನ ತನಕ ತುಳು ಯಕ್ಷಗಾನ ಬಯಲಾಟ ಸತ್ಯೋದ ಸ್ವಾಮಿ ಕೊರಗಜ್ಜ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ. ಎ.9ರಂದು ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆದು ಅನ್ನಸಂತರ್ಪಣೆ ನಡೆಯುವುದು.