ಸುಳ್ಯದಲ್ಲಿ ಬಿಜೆಪಿ – ಜೆಡಿಎಸ್ ನಾಯಕರ ಜಂಟಿ ಸಭೆ

0

ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರ ಜಂಟಿ ಸಭೆಯು ಸುಳ್ಯದ ಬಿಜೆಪಿ ಕಛೇರಿಯಲ್ಲಿ ಎ.6ರಂದು ನಡೆಯಿತು.


ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ತಾಲೂಕು ಜಾತ್ಯಾತೀತ ಜನತಾ ದಳ ಅಧ್ಯಕ್ಷ ಸುಕುಮಾರ ಕೋಡ್ಕುಗುಳಿ , ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಮ್.ಬಿ ಸದಾಶಿವ , ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ , ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್ ಮನ್ಮಥ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ , ಮಂಡಲ ಸಮಿತಿ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಮುಂದಿನ ಲೋಕಾಸಭಾ ಚುನಾವಣೆಯ ಹಿನ್ನಲೆಯಲ್ಲಿ ಎರಡೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮತದಾರರ ಭೇಟಿ , ಮಹಾ ಸಂಪರ್ಕ ಅಭಿಯಾನ , ಕಾರ್ಯಕರ್ತರ ಸಭೆ , ಬೈಲು ಸಭೆ ನಡೆಸುವ ಕುರಿತು ಚರ್ಚಿಸಲಾಯಿತು.


ಬೂತ್ ಮಟ್ಟದಲ್ಲಿ ಎರಡೂ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಜೊತೆಯಾಗಿ ಕೆಲಸ ಮಾಡುವ ಮೂಲಕ ಮೈತ್ರಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಅತ್ಯಧಿಕ ಬಹುಮತಗಳಿಂದ ಆಯ್ಕೆ ಮಾಡಿ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಬೇಕೆಂದು ಉಭಯ ಪಕ್ಷದ ನಾಯಕರು ಮಾತನಾಡಿದರು.


ಸಭೆಯಲ್ಲಿ ಜನತಾ ದಳದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಯೂತ್ ಅಧ್ಯಕ್ಷ ಹರಿಪ್ರಸಾದ್ ಎಮ್.ಕೆ., ಉಪಾಧ್ಯಕ್ಷ ಉದಯ್ ಕುಮಾರ್, ಪ್ರಮುಖರಾದ ರೋಹನ್ ಪೀಟರ್ , ಮಹಾಲಕ್ಷ್ಮೀ ಕುರುಂಜಿ , ಚೋಮ, ಹನೀಫ್ ಮೊಟ್ಟೆಂಗಾರು, ರಾಮಚಂದ್ರ ಬಳ್ಳಡ್ಕ, ಶಿವರಾಮ ಚಿಲ್ತಡ್ಕ, ದಯಾಕರ ಆಳ್ವ, ಮಂಜಪ್ಪ ರೈ, ಗೋಪಾಲಕೃಷ್ಣ, ವಿಪುಲ್ ನೀರ್ಪಾಡಿ, ತಿಲಕ್ ,ಅಬ್ದುಲ್ ಖಾದರ್ , ಬಿಜೆಪಿ ಪ್ರಮುಖರಾದ ಸುಧಾಕರ ಕಾಮತ್, ಶಿವಾನಂದ ಕುಕ್ಕುಂಬಳ, ಎ.ಟಿ.ಕುಸುಮಾಧರ್ , ಸುಧಾಕರ ಕಾಮತ್, ವಸಂತ ನಡುಬೈಲು, ಶ್ರೀಧರ ಪಾಲ್ತಾಡಿ, ಆಶೋಕ್ ಅಡ್ಕಾರು, ಶಿವಪ್ರಸಾದ್ ನಡುಬೈಲು, ಐ.ಬಿ. ಚಂದ್ರಶೇಕರ್, ಮಹಿಳಾ ಮೋರ್ಚಾದ ಇಂದಿರಾ ಬಿ.ಕೆ, ರವೀಂದ್ರ ಕೊಡಿಯಾಲುಬೈಲು, ಸುiನಾಥ ಪೂಜಾರಿ ಸುಳ್ಯ, ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.