ಜಾಲ್ಸೂರು: ಶ್ರೀ ದಾಲ್ಸೂರಾಯಿ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0

ಜಾಲ್ಸೂರಿನ ಗ್ರಾಮದೈವ ಅರಿಯಡ್ಕದಲ್ಲಿರುವ ಶ್ರೀ ದಾಲ್ಸೂರಾಯಿ ದೈವಸ್ಥಾನದಲ್ಲಿ ಶ್ರೀ ದಾಲ್ಸೂರಾಯಿ ದೈವದ ಪ್ರತಿಷ್ಠಾ ವಾರ್ಷಿಕೋತ್ಸವವು ಎ.12ರಂದು ಜರುಗಿತು.

ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು ‌
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಅರಿಯಡ್ಕ ಸೇರಿದಂತೆ ಜಾಲ್ಸೂರು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.