ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ- ಮಕ್ಕಳ ಹಬ್ಬ ಉದ್ಘಾಟನೆ

0

ಪಂಜದ ಡ್ಯಾನ್ಸ್ ಅಂಡ್ ಬೀಟ್ಸ್ ನೇತೃತ್ವದಲ್ಲಿ ಅದ್ವೈತ ಮಕ್ಕಳ ಬೇಸಿಗೆ ಶಿಬಿರ “ಪಂಜ ಮಕ್ಕಳ ಹಬ್ಬ 2024” ಏ.14 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಉದ್ಘಾಟನೆ ಗೊಂಡಿತು.

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಉದ್ಘಾಟಿಸಿ ಶುಭಹಾರೈಸಿದರು.

ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯರ ಲಕ್ಷ್ಮೀಶ ಗಬ್ಲಡ್ಕ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ,ಹಸಿರು ದಳ ಫೆಡರೇಶನ್ ನಿರ್ದೇಶಕ ನಾಗರಾಜ್, ಶಿಬಿರದ ನಿರ್ದೇಶಕರಾದ ಡ್ಯಾನ್ಸ್ ಬೀಟ್ಸ್ ಬೆಳ್ಳಾರೆ ನಿರ್ದೇಶಕ ಜೀವನ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 130ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಮೇಧಾ ನಾರಾಯಣ ಭಟ್ ಪ್ರಾರ್ಥಿಸಿದರು. ತನ್ವಿ ಸ್ವಾಗತಿಸಿದರು.ಧನುಷ್ ಎಣ್ಮೂರು ನಿರೂಪಿಸಿದರು.
ಆಸ್ಮಿ ವಂದಿಸಿದರು.