ತೋಟಂಪಾಡಿ ಉಳ್ಳಾಕುಳು ದೈವದ ಭಂಡಾರ ಆಗಮನ ದೇವರಿಗೆ ಸಣ್ಣ ದರ್ಶನ ಬಲಿ
ಸುಳ್ಯಸೀಮೆ ಮಹತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಲ್ಲಿ ಕಾಲಾವಧಿ ಜಾತ್ರೋತ್ಸವವು ಎ.13ರಂದು ಬೆಳಿಗ್ಗೆ ಧ್ವಜಾರೋಹಣ ಹಾಗೂ ಉಗ್ರಾಣ ತುಂಬಿಸುವುದರ ಮೂಲಕ ಪ್ರಾರಂಭಗೊಂಡಿದ್ದು, ಇಂದು ದೇವರ ಸನ್ನಿಧಿಯಲ್ಲಿ ಸಣ್ಣ ದರ್ಶನ ಬಲಿ ಜರುಗಿತು.
ಎ.13ರಂದು ಸಂಜೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯವರಿಂದ ಭಜನಾ ಸೇವೆ ಜರುಗಿತು.
ಎ.14ರಂದು ಬೆಳಿಗ್ಗೆ ದೇಗುಲದಲ್ಲಿ ವಿಷುಕಣಿ, ಬಳಿಕ ಶತರುದ್ರಾಭಿಷೇಕ, ಅರಂಬೂರಿನ ಭಾರದ್ವಾಜಾಶ್ರಮದ ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯದ ವಿದ್ಯಾರ್ಥಿಗಳಿಂದ ವೇದ ಪಾರಾಯಣ ಜರುಗಿತು.
ರಾತ್ರಿ ಹನುಮಗಿರಿ ಯಕ್ಷಗಾನ ಮೇಳದವರಿಂದ ಇಂದ್ರಪ್ರಸ್ಥ ಯಕ್ಷಗಾನ ಬಯಲಾಟ ಜರುಗಿತು.
ಎ.15ರಂದು ಸಂಜೆ ತೋಟಂಪಾಡಿ ಶ್ರೀ ಉಳ್ಳಾಕುಳು ದೈವಸ್ಥಾನದಿಂದ ದೈವದ ಭಂಡಾರ ಆಗಮಿಸಿದ ಬಳಿಕ ದೇವರ ಉತ್ಸವ ಬಲಿ ಹೊರಡಲಾಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಎ.16ರಂದು ಬೆಳಿಗ್ಗೆ ಶ್ರೀ ಮಲ್ಲಿಕಾರ್ಜುನ ದೇವರಿಗೆ ಸಣ್ಣದರ್ಶನ ಬಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಕಾರ್ಯನಿರ್ವಹಣಾಧಿಕಾರಿ ಅವಿನ್ ರಂಗತ್ ಮಲೆ, ಆಡಳಿತಾಧಿಕಾರಿ ರಮೇಶ್ ಬಿ.ಈ. ಕಛೇರಿ ವ್ಯವಸ್ಥಾಪಕ ಆನಂದ ಕಲ್ಲಗದ್ದೆ ಸೇರಿದಂತೆ ಸಿಬ್ಬಂದಿಗಳು, ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರುಗಳು, ಸದಸ್ಯರುಗಳು ಸೇರಿದಂತೆ ಸೀಮೆಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.