ಸುಳ್ಯದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಆರ್. ಪದ್ಮರಾಜ್ ಪೂಜಾರಿಯವರ ಹೇಳಿಕೆ
ಕಾಂಗ್ರೇಸ್ ಪಕ್ಷದ ಆಡಳಿತ ಕೇಂದ್ರ ಸರ್ಕಾರದಲ್ಲಿ ಇರುವ ಸಂದರ್ಭದಲ್ಲಿ ನಮ್ಮ ಜಿಲ್ಲೆಗೆ ಹತ್ತಾರು ಯೋಜನೆಗಳನ್ನು ತಂದು ಕೊಟ್ಟಂತಹ ಕೀರ್ತಿ ಅಂದಿನ ನಮ್ಮ ಸಂಸದರಿಗೆ ಸಲ್ಲುವಂತಹದ್ದಾಗಿದೆ.
ಆದರೆ ಬಿಜೆಪಿ ಪಕ್ಷದ ಆಡಳಿತ ಬಂದ ನಂತರ ಪ್ರಸ್ತುತ ಸಂಸದರು ಮಾಡಿರುವಂತಹ ಸಾಧನೆ ಎಂದರೆ ಜಾತಿ ಧರ್ಮಗಳಲ್ಲಿ ಸಂಘರ್ಷವನ್ನು ಹೇರಿ ತುಳು ನಾಡಿನ ಗತ ವೈಭವದ ಸಂಸ್ಕೃತಿಯ ಮೇಲೆ ಕೊಡಲಿ ಏಟನ್ನು ನೀಡಿರುವುದೇ ದ.ಕ ಜಿಲ್ಲೆಯಲ್ಲಿ ಬಿಜೆಪಿಯ ಸಾಧನೆ ಎಂದು ದ.ಕ ಜಿಲ್ಲಾ ಲೋಕಸಭಾ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಆರ್ . ಪದ್ಮರಾಜ್ ಪೂಜಾರಿಯವರು ಇಂದು ಸುಳ್ಯದಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಉದ್ದೇಶಿಸಿ ಮಾತನಾಡಿದ್ದಾರೆ.
ಬಿಜೆಪಿಯವರು ಈ ಬಾರಿಯ ಚುನಾವಣೆಯನ್ನು ಹಿಂದುತ್ವ ಮತ್ತು ಮೋದಿಯ ಹೆಸರಿನಲ್ಲಿ ಮಾಡುತ್ತಿದ್ದು ಇವರ ಹಿಂದುತ್ವವನ್ನು ಯಾರು ಕೂಡ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾನು ಕೂಡ ಒಬ್ಬ ನಿಷ್ಟಾವಂತ ಹಿಂದು ಆಗಿದ್ದಾನೆ. ನಾನು ಕಲಿತ ಹಿಂದು ಧರ್ಮ ಸೌರ್ಹಾದತೆಯನ್ನು ಕಲಿಸುವುದರೊಂದಿಗೆ ಇತರ ಧರ್ಮವನ್ನು ಪ್ರೀತಿಸುವ ಮತ್ತು ಸಮಾಜದಲ್ಲಿ ಸಂಕಷ್ಟದಲ್ಲಿರುವರಿಗೆ ಸಹಾಯ ಹಸ್ತವನ್ನು ನೀಡಲು ಕಲಿಸಿದ ಧರ್ಮವಾಗಿದೆ. ಆದ್ದರಿಂದ ನಮ್ಮ ಜಿಲ್ಲೆಯ ಪ್ರತಿಯೊಬ್ಬ ಮತದಾರ ಬಾಂಧವರು ರಾಷ್ಟ್ರದ ಅಭಿವೃದ್ಧಿ ಮತ್ತು ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿರುವ ನನಗೆ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸುವಂತೆ ವಿನಂತಿಸಿಕೊಂಡರು. ಈ ಸಂದರ್ಭ ವೇದಿಕೆಯಲ್ಲಿ ಪುತ್ತೂರು ಮಾಜಿ ಶಾಸಕಿ ಚುನಾವಣಾ ಉಸ್ತುವಾರಿ ಶಕುಂತಲಾ ಶೆಟ್ಟಿ , ದ.ಕ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ರಮೇಶ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಎಮ್ . ಎಸ್ .ಮಹಮ್ಮದ್ , ಕೆಪಿಸಿಸಿ ಸದಸ್ಯ ಜೆ. ಕೃಷ್ಣಪ್ಪ, ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿಸಿ ಜಯರಾಮ್ ಉಪಸ್ಥಿತರಿದ್ದರು.
ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ಕಾರ್ಯಕರ್ತರು. ಈ ಪ್ರಚಾರ ಸಭೆಯ ಸಂದರ್ಭದಲ್ಲಿ ಸುಳ್ಯ ಭಜನಾ ತಂಡದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಕಾರ್ಯಕರ್ತೆ ಸಂಧ್ಯಾ ಮಂಡೆಕೋಲು ಹಾಗೂ ಜಾಲ್ಸೂರು ಭಾಗದ ವಿನೋದ್ ಮಹಾಬಲಡ್ಕ , ಸ್ವಚ್ಛ ಕಿರಣ ತಂಡದ ಸದಸ್ಯರಾಗಿರುವ ಸತೀಶ್, ಕೃಷ್ಣಪ್ಪ ನಾಯ್ಕ್, ರಂಜಿತ್ , ಜಯರಾಮ, ಪ್ರೇಮ, ಅಮ್ಮಣ್ಣಿ, ಬೇಬಿ, ಗೀತಾ ಇವರುಗಳು ಆ ಭಾಗದ ಕಾಂಗ್ರೇಸ್ ಪಕ್ಷದ ಮುಖಂಡರುಗಳಾದ ತೀರ್ಥರಾಮ ಜಾಲ್ಸೂರು ಹಾಗೂ ಶ್ರೀಮತಿ ತಿರುಮಲೇಶ್ವರಿ , ಪುರುಷೋತ್ತಮ ನಂಗಾರುರವರ ನೇತ್ರತ್ವದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ಅಭ್ಯರ್ಥಿ ಆರ್ ಪದ್ಮರಾಜ್ ಪೂಜಾರಿ ಪಕ್ಷದ ಧ್ವಜವನ್ನು ನೀಡಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರುಗಳಾದ ಡಾ. ರಘು ,ಕಿರಣ್ ಬುಡ್ಲೆಗುತ್ತು , ಧನಂಜಯ ಅಡ್ಪಂಗಾಯ , ಟಿ. ಎಂ.ಶಾಹೀದ್ , ಎಂ. ವೆಂಕಪ್ಪ ಗೌಡ , ವಹಿದ ಇಸ್ಮಾಹಿಲ್, ರಾಜೀವಿ ಆರ್ ರೈ , ಗೀತಾ ಕೋಲ್ಚಾರ್, ಭರತ್ ಮುಂಡೋಡಿ, ನಿತ್ಯಾನಂದ ಮುಂಡೋಡಿ, ಪಿ.ಎ ಮಹಮ್ಮದ್ , ಮಸ್ತಫ ಜನತ, ಚಂದ್ರ ಲಿಂಗಂ, ಹಮೀದ್ ಕುತ್ತಮೊಟ್ಟೆ, ಇಕ್ಬಾಲ್ ಎಲಿಮಲೆ, ಕೆ ಎಸ್ ಉಮ್ಮರ್ , ಆಜಿ ಇಬ್ರಾಹಿಮ್ ಕತ್ತರ್ ಮಂಡೆಕೋಲು, ಗೋಕುಲ್ ದಾಸ್, ಭವಾನಿ ಶಂಕರ್ ಕಲ್ಮಡ್ಕ, ರಾಜು ಪಂಡಿತ್ , ಶಾಫಿ ಕುತ್ತಮೊಟ್ಟೆ, ಶ್ರೀಮತಿ ಪ್ರವೀಣಾ ಮರುವಂಜೆ, ಸುಜಯ ಕೃಷ್ಣ, ಜುಲಿಯಾನ ಕ್ರಾಸ್ತ, ನಂದರಾಜ್ ಸಂಕೇಶ್, ಆನಂದ ಬೆಳ್ಳಾರೆ, ಆಮ್ ಆದ್ಮಿ ಪಕ್ಷದ ಮುಖಂಡರುಗಳಾದ ಅಶೋಕ್ ಎಡಮಲೆ , ಕಲಂದರ್ ಎಲಿಮಲೆ, ಶಾಫಿ ಮೊಗರ್ಪಣೆ, ಮೊದಲದವರು ಉಪಸ್ಥಿತರಿದ್ದರು.