ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಕಾಂಗ್ರೆಸ್ಸಿಗರಿಂದ ಲೂಟಿ : ಬಿಜೆಪಿ ಪತ್ರಿಕಾಗೋಷ್ಠಿ

0

ಕೇಂದ್ರ ಸರಕಾರದ ಫಸಲ್ ಬಿಮಾ ಯೋಜನೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯ ಹಣ ಕಾಂಗ್ರೆಸ್ಸಿಗರು ಪಡೆಯುದಿಲ್ಲವೇ?. ಅವರು ಕೇಂದ್ರದ ಯೋಜನೆಯನ್ನು ಪಡೆದು ಪರಿಣತರಂತೆ ಮಾತನಾಡುತ್ತಾರೆ. ಕಾಂಗ್ರೆಸ್ಸಿಗರು ಹೇಳೋದೆಲ್ಲವೂ ಸುಳ್ಳು. ಆದ್ದರಿಂದಲೇ ಅವರನ್ನು ಜನರು ನಂಬದ ಸ್ಥಿತಿ ನಿರ್ಮಾಣವವಾಗಿದೆ. ಈ ಬಾರಿಯೂ ಸುಳ್ಯದಲ್ಲಿ ದೊಡ್ಡ ಅಂತರದ ಲೀಡ್ ಬಿಜೆಪಿ ಪಡೆದೇ ಪಡೆಯುತ್ತದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಚುನಾವಣಾ ಉಸ್ತುವಾರಿ ಸಮಿತಿಯ ಸಂಚಾಲಕ ಹರೀಶ್ ಕಂಜಿಪಿಲಿ ಹೇಳಿದ್ದಾರೆ.


ಎ.24ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆಯವರು, ಕಾಂಗ್ರೆಸ್‌ನವರು ಒಂದು ಬೂತ್‌ಗಳಲ್ಲಿ ೧೦೦ ಕ್ಕೂ ಹೆಚ್ಚಿಗೆ ಮತ ಪಡೆಯೂತ್ತೇವೆ ಎಂದು ಹೇಳುತ್ತಾರೆ. ಅವರು ನಿಜವಾಗಿಯೂ ಭ್ರಮೆಯಿಂದಲೇ ಮಾತನಾಡೋದು. ಕೆಲವು ಕಡೆ ಫೀಲ್ಡ್ ಮಾಡಲು ಅವರಿಗೆ ಜನರೇ ಇಲ್ಲ. ಅವರು ಅಧಿಕಾರ ಇದ್ದರೆ ಮಾತ್ರ ಮಾತನಾಡೋದು. ಮತದಾರರಿಗೆ ಇಲ್ಲ ಸಲ್ಲದ ಆಮಿಷ ಒಡ್ಡುತ್ತಿರುವುದೇ ಕಾಂಗ್ರೆಸ್ ಕೆಲಸ. ಇಲ್ಲ ಸಲ್ಲದ ಆರೋಪಗಳನ್ನು ಮಾಡಿಕೊಂಡೇ ಕಾಲ ಹರಣ ಮಾಡುತಿದ್ದಾರೆ” ಎಂದು ಹೇಳಿದರು. ಈ ಬಾರಿ ಸುಳ್ಯ ಕ್ಷೇತ್ರದಲ್ಲಿ ೬೦ ಸಾವಿರ ಲೀಡ್ ಪಡೆದೇ ಪಡೆಯುತ್ತೇವೆ. ಆ ಮೂಲಕ ವಿರೋಧಿಗಳಿಗೆ ಪ್ರತ್ಯುತ್ತರ ನೀಡಲಾಗುವುದು. ಈ ದೇಶದ ಜನರಿಗೆ ನೆಮ್ಮದಿಯ ಬದುಕಿಗಾಗಿ ಕೇಂದ್ರದಲ್ಲಿ ಮೋದಿ ಸರಕಾರ ಬರಲೇ ಬೇಕು. ಇದಕ್ಕಾಗಿ ಎಲ್ಲ ಮತದಾರರು ಬಿಜೆಪಿಯನ್ನು ಗೆಲ್ಲಿಸಲು ಸಂಕಲ್ಪ ಮಾಡಿದ್ದಾರೆ” ಎಂದು ಹೇಳಿದರು.


ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಗ್ಯಾರಂಟಿ ಯೋಜನೆಯ ದೊಡ್ಡ ಫಲಾನುಭವಿಗಳು ಕಾಂಗ್ರೆಸ್ಸಿಗರೇ. ಅದನ್ನು ಗಂಜಿ ಕೇಂದ್ರದಂತೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಕಾಂಗ್ರೆಸ್ಸಿಗರಿಂದ ಲೂಟಿ ನಡೆಯುತ್ತಿದೆ. ಇತ್ತೀಚೆಗೆ ಗ್ಯಾರಂಟಿ ಸಮಾವೇಶ ಸುಳ್ಯದಲ್ಲಿ ನಡೆದಿತ್ತು. ಅದರಲ್ಲಿ ಸಮಾವೇಶ ಸಭಾಂಗಣಕ್ಕೆ 1 ಲಕ್ಷ ಬಾಡಿಗೆ ಎಂದು ತೋರಿಸಲಾಗಿದೆ. ನಿಜವಾಗಿ ಅಲ್ಲಿಗೆ ಎಷ್ಟು ಕೊಟ್ಟಿರಬಹುದು ?. ಒಟ್ಟಾರೆಯಾಗಿ ದೋಚಲೆಂದೇ ಹೀಗೆಲ್ಲ ಮಾಡುತ್ತಿದ್ದಾರೆ ಎಂದ ಅವರು, ನಗರ ಪಂಚಾಯತ್‌ನಲ್ಲಿ ಭಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವುದೇ ಕಾಂಗ್ರೆಸ್ಸಿನ ಸದಸ್ಯರು. ಅಕ್ರಮಗಳಿಗೆ ಪ್ರೋತ್ಸಾಹ ನೀಡೋದೇ ಅವರು ಎಂದು ಆರೋಪಿಸಿದರು. ಮೋದಿ ಸರಕಾರ ರಾಜ್ಯಕ್ಕೆ ಚೊಂಬು ನೀಡಿದ್ದಲ್ಲ. ಅಕ್ಷಯ ಪಾತ್ರೆಯನ್ನು ಕೊಟ್ಟಿದೆ. ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಸರಕಾರ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟು ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದು ಯಾರು, ರೈತ ವಿದ್ಯಾನಿಧಿಯನ್ನು ನಿಲ್ಲಿಸಿದ್ದು ಯಾರು? ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದಿಂದ ರೈತರಿಗೆ ನೀಡುವ ರೂ. 4 ಸಾವಿರ ನಿಲ್ಲಿಸಿದ್ದು ಯಾರು, ಎಸ್ಸಿ, ಎಸ್ಟಿ ಯೋಜನೆಯ ಅನುದಾನವನ್ನು ಬದಲಾಯಿಸಿದ್ದು ಯಾರು? ಇತ್ಯಾದಿ ಪ್ರಶ್ನೆ ಹಾಕಿದ ಅವರುಎಲ್ಲವನ್ನು ಮಾಡಿದ್ದು ಕಾಂಗ್ರೆಸ್ಸಿಗರು. ಇದು ಜನರಿಗೆ ಗೊತ್ತಿದೆ” ಎಂದು ಹೇಳಿದರು.


ಗ್ಯಾರಂಟಿ ಯೋಜನೆಯನ್ನು ನಾವು ಟೀಕಿಸಲು ಹೋಗುವುದಿಲ್ಲ. ಆದರೆ ಕೇಂದ್ರ ಸರಕಾರ ಫಸಲ್ ಬಿಮಾ ಯೋಜನೆಯಲ್ಲಿ ಲಕ್ಷ ಗಟ್ಟಲೆ ಹಣ ನೀಡುತ್ತದೆಯಲ್ಲವೇ ಅದು ಕಾಂಗ್ರೆಸ್ಸಿನ ವೆಂಕಪ್ಪ ಗೌಡರ ಖಾತೆಗೂ ಬಂದಿದೆ. ಪಿ.ಎಸ್. ಗಂಗಾಧರ್, ಇತರ ಕಾಂಗ್ರೆಸ್ಸಿಗರ ಖಾತೆಗೂ ಬಂದಿದೆಯಲ್ಲವೇ? ಅವರು ಸತ್ಯ ಒಪ್ಪಿಕೊಳ್ಳಲಿ. ನಮ್ಮಲ್ಲಿಯೂ ಆ ಪಟ್ಟಿ ಇದೆ. ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಕೇಂದ್ರ ನೀಡುತ್ತದೆಯಲ್ಲ ಎಂದು ಹೇಳಿದರಲ್ಲದೆ, ಮುದ್ರಾ ಯೋಜನೆ ಸಹಿತ ೮೦೦ ಕ್ಕೂ ಅಧಿಕ ಜನಪರ ಯೋಜನೆಯನ್ನು ಕೇಂದ್ರ ಜನರಿಗೆ ನೀಡುತ್ತದೆ. ಅದನ್ನು ಕಾಂಗ್ರೆಸ್ಸಿಗರು ಪಡೆದಿಲ್ಲವೇ? ಜರು ಸ್ವಾವಲಂಬಿಯಾಗಿ ಬದುಕೋದಕ್ಕೆ ದಾರಿ ಮಾಡಿ ಕೊಟ್ಟಿರುವುದು ಮೋದಿ ನೇತೃತ್ವದ ಕೇಂದ್ರ ಸರಕಾರ ಎಂದು ಹೇಳಿದರು.


ಚುನಾವಣಾ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, “ಸುಳ್ಯ ಇಂದು ಬಿಜೆಪಿಯ ಭದ್ರ ಕೋಟೆ ಮುಂದೆಯೂ ಭದ್ರ ಕೋಟೆಯಾಗಿಯೇ ಇರುತ್ತದೆ. ನಾವು ಜನ ಸಾಮಾನ್ಯರ ಕಷ್ಟಕ್ಕೆ ಧ್ವನಿಯಾಗುತ್ತೇವೆ ಆದ್ದರಿಂದ ಜನರು ನಮ್ಮ ಜತೆಗಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಗುರಿಯನ್ನು ನಾವು ತಲುಪಿಯೇ ತಲುಪುತ್ತೇವೆ ಎನ್ನುವ ವಿಶ್ವಾಸ ನಮಗಿದೆ. ಹತ್ತಾರು ಸರಕಾರಗಳು ಅಧಿಕಾರಕ್ಕೆ ಬರುತ್ತದೆ. ಸರಕಾರಗಳು ತರುವ ಯೋಜನೆಯನ್ನು ಅನುಷ್ಠಾನ ಮಾಡಲು ಕೂಡಾ ಸಮಿತಿ ಮಾಡಿದ್ದಾರೆ ಅಧಿಕಾರಿಗಳು, ಸಚಿವರು ಯೋಜನೆಯನ್ನು ತಲುಪಿಸಲು ಸಾಧ್ಯವಿಲ್ಲವೇ?. ಆದ್ದರಿಂದ ಗ್ಯಾರಮಟಿ ಅನುಷ್ಠಾನ ಸಮಿತಿಯನ್ನು ವಿಸರ್ಜಿಸಬೇಕೆಂದು ಸರಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದ ಅವರು, ಧಾರ್ಮಿಕ ಪರಿಷತ್ ಸದಸ್ಯರಾದವರು ಯಾವುದೇ ಪಕ್ಷದ ಪರ ಇರಬಾರದು. ಆದರೆ ಲಕ್ಷ್ಮೀಶ್ ಗಬ್ಲಡ್ಕರು ಕಾಂಗ್ರೆಸ್ ಗೆಲ್ಲಿಸಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ಅವರನ್ನು ಸಮಿತಿಯಿಂದ ವಜಾ ಮಾಡಬೇಕು. ಈ ಕುರಿತು ಚುನಾವಣಾ ಆಯೋಗಕ್ಕೆ ನಾವು ದೂರು ನೀಡಲಿzವೆ” ಎಂದು ಹೇಳಿದರು.


ಬಿಎಂಎಸ್ ಕಾರ್ಮಿಕ ಸಂಘಟನೆಯ ತಾಲೂಕು ಕಾರ್ಯದರ್ಶಿ ಮಧುಸೂಧನ್ ಮಾತನಾಡಿ, ಈಗಿನ ರಾಜ್ಯಸರಕಾರ ಕಾರ್ಮಿಕರಿಗೆ ಹಾಗೂ ಕಾರ್ಮಿಕ ಮಕ್ಕಳಿಗೆ ಅನ್ಯಾಯ ಮಾಡಿದೆ. ವಿದ್ಯಾರ್ಥಿ ವೇತನವನ್ನು ಕಡಿತ ಮಾಡಿದೆ. ಇದರಿಂದ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ ಎಂದು ಸವಿಸ್ತವಾಗಿ ಸರಕಾರ ಕಡಿತ ಮಾಡಿರುವ ವಿವರನ್ನು ಪತ್ರಿಕಾಗೋಷ್ಠೀಯಲ್ಲಿ ನೀಡಿದರು.
ಬಿಜೆಪಿ ನಗರ ಅಧ್ಯಕ್ಷ ಎ.ಟಿ. ಕುಸುಮಾಧರ, ಮಂಡಲ ಉಪಾಧ್ಯಕ್ಷ ಶಿವಪ್ರಸಾನ್ ನಡುತೋಟ, ಬಿಜೆಪಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಆಲೆಟ್ಟಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಸುದರ್ಶನ್ ಪಾತಿಕಲ್ಲು ಇದ್ದರು.