ಏ.26 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಪಂಜ ಗ್ರಾಮ ಪಂಚಾಯತ್ ನ ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮದ 4437 ಮತದಾರಲ್ಲಿ 3746 ಮಂದಿ ಮತದಾನ ಮಾಡಿದ್ದು ಶೇ.84.42 ಮತದಾನ ಆಗಿದೆ.
ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಐವತ್ತೊಕ್ಲು ಗ್ರಾಮದ ಮೂರನೇ ವಾರ್ಡ್ ನಲ್ಲಿ ಒಟ್ಟು 1230 ಮತಗಳಿದ್ದು 1030 ಮತದಾನವಾಗಿದೆ. ಕರಿಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐವತ್ತೊಕ್ಲು ಗ್ರಾಮದ ಒಂದನೇ ವಾರ್ಡ್ ನ ಮತಗಟ್ಟೆಯಲ್ಲಿ 976 ಮತಗಳಿದ್ದು 803 ಮತದಾನವಾಗಿದೆ. ಪಾಂಡಿಗದ್ದೆ ಸರಕಾರಿ ಪ್ರಾಥಮಿಕ ಶಾಲೆಯ ಐವತ್ತೊಕ್ಲು ಗ್ರಾಮದ ಎರಡನೇ ವಾರ್ಡ್ ನ ಮತಗಟ್ಟೆಯಲ್ಲಿ 761 ಮತಗಳಿದ್ದು 674 ಮತದಾನವಾಗಿದೆ.
ನಾಗತೀರ್ಥ ಸರಕಾರಿ ಪ್ರಾಥಮಿಕ ಶಾಲೆಯ ಕೂತ್ಕುಂಜ ಗ್ರಾಮದ ಎರಡನೇ ವಾರ್ಡ್ ನ ಮತಗಟ್ಟೆಯಲ್ಲಿ 877 ಮತಗಳಿದ್ದು 733 ಮತದಾನವಾಗಿದೆ. ಅಡ್ಡತ್ತೋಡು ಶಾಲೆಯ ಒಂದನೇ ವಾರ್ಡ್ ನ ಮತಗಟ್ಟೆಯಲ್ಲಿ 593 ಮತಗಳಿದ್ದು 506ಮತದಾನವಾಗಿದೆ ಎಂದು ತಿಳಿದು ಬಂದಿದೆ.