ಜಯನಗರ :ಮದರಸ ಪ್ರಾರಂಭೋತ್ಸವ

0

ಉತ್ತಮ ಜೀವನವನ್ನು ರೂಪಿಸುವ ಬಹುದೊಡ್ಡ ಅಸ್ತ್ರ ಶಿಕ್ಷಣ ವಾಗಿದೆ: ಶಫೀಕ್ ಹಿಮಮಿ

ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ & ಮದರಸ ವತಿಯಿಂದ ನೂತನ ಶೈಕ್ಷಣಿಕ ವರ್ಷದ ಮದರಸ ಪ್ರಾರಂಭೋತ್ಸವ ಇಂದು ಮದರಸ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ ಯು ಎಂ ಎಂ ಕಮಿಟಿ ಅಧ್ಯಕ್ಷ ನವಾಜ್ ಪಂಡಿತ್ ವಹಿಸಿದ್ದರು.
ಸ್ಥಳೀಯ ಮದರಸ ಸದರ್ ಮೊಅಲ್ಲಿಂ ಶಫೀಕ್ ಹಿಮಮಿ ದುವಾ ನೆರವೇರಿಸಿ ಮಾತನಾಡಿ ‘ಶಿಕ್ಷಣ ಎಂಬುವುದು ಒಂದು ಅಮೂಲ್ಯ ನಿಧಿಯಾಗಿದ್ದು ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದಲ್ಲಿ ಉತ್ತಮ ಜೀವನವನ್ನು ರೂಪಿಸುವ ಅಸ್ತ್ರವು ಕೂಡ ಆಗಿದೆ.
ಆದ್ದರಿಂದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣವನ್ನು ನೀಡಬೇಕಾಗಿದ್ದು ಪೋಷಕರ ಕರ್ತವ್ಯವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮದರಸ ಉಸ್ತುವಾರಿ ಡಿ ಎಂ ಜಬ್ಬಾರ್, ಸದಸ್ಯರುಗಳಾದ ಹಾಜಿ ಅಬ್ದುಲ್ಲಾ, ಶಿಯಾಬ್ ಫಿಶ್, ಮುನೀರ್, ಸಮಿತಿಯ ಮಾಜಿ ಕಾರ್ಯದರ್ಶಿ ಕೆ ಎಂ ಇಲ್ಯಾಸ್, ಮದರಸಾ ಮಾಜಿ ಉಸ್ತುವಾರಿ ಹನೀಫ್ ಗಾರ್ಬಲ್, ಪೋಷಕರಾದ ಸಂಶುದ್ದೀನ್ ಇಂದ್ರಾಜೆ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒಂದನೆಯ ತರಗತಿಗೆ ದಾಖಲಾದ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು.
ಸ್ಥಳೀಯ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಪ್ರಧಾನ ಕಾರ್ಯದರ್ಶಿ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.