ಪ್ರಸಕ್ತ ಕುದ್ಪಾಜೆ ತನ್ನ ಹುಟ್ಟು ಹಬ್ಬದ ಪ್ರಯುಕ್ತ ಕೊಡಿಯಾಲಬೈಲು ಅಂಗನವಾಡಿ ಶಾಲೆಗೆ ಅವಶ್ಯಕವಾಗಿದ್ದ ಮಿಕ್ಸಿಯನ್ನು ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ.
ಎ.26ರಂದು ಅಂಗನವಾಡಿ ಶಿಕ್ಷಕಿ ಸುಶೀಲಾರವರಿಗೆ ಮಿಕ್ಸಿಯನ್ನು ಹಸ್ತಾಂತರಿಸಲಾಯಿತು.
ಇವರು ದೇವಿಪ್ರಸಾದ್ ಕುದ್ಪಾಜೆ ಹಾಗೂ ಅರೆಬಾಷೆ ಅಕಾಡೆಮಿಯ ಸದಸ್ಯರಾದ ಲತಾ ಪ್ರಸಾದ್ ಕುದ್ಪಾಜೆ ದಂಪತಿಯ ಪುತ್ರಿ.
ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಕಲಿಯುತ್ತಿದ್ದಾರೆ.
ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳು ನಶಿಸಿ ಹೋಗುತ್ತಿರುವ ಇಂದಿನ ದಿನಮಾನದಲ್ಲಿ ತನ್ನ ಈ ಬಾರೀಯ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಇವರು ಆಚರಿಸಿದರು.