ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭವು ಮೇ 2 ರಂದು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಓದುವ ಪುಸ್ತಕಗಳನ್ನು ಕೆ.ಎಮ್ ಇಬ್ರಾಹಿಂ ಕುಕ್ಕುಂಬಳ ರವರ ಧರ್ಮಪತ್ನಿ ಮರ್ ಹೂಮ್ ಖದೀಜಾ ರವರ ಸ್ಮರಣಾರ್ಥ ಅವರ ಮಕ್ಕಳು ಕೊಡುಗೆಯನ್ನಾಗಿ ನೀಡಿದರು, ಬರೆಯುವ ಪುಸ್ತಕಗಳನ್ನು ಮರ್ ಹೂಮ್ ಹಾಜಿ ಮಹಮ್ಮದ್ ರವರ ಸ್ಮರಣಾರ್ಥ ಅವರ ಮಗ ಅಬ್ದುಲ್ ಮಜೀದ್ ಕೊಡುಗೆಯಾಗಿ ನೀಡಿದರೆ ಬ್ಯಾಗ್ ಗಳನ್ನು ಪಠೇಲ್ ಚಾರಿಟೇಬಲ್ ಟ್ರಸ್ಟ್ ನೀಡಿತು.
ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಖತೀಬರಾದ ಬಹು|ಇಸ್ಮಾಯಿಲ್ ಫೈಝಿ ವಿತರಿಸಿ ಶುಭ ಹಾರೈಸಿದರು. ಸದರ್ ನೌಶಾದ್ ಅಝ್ ಹರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಸಹಾಯಕ ಅಧ್ಯಾಪಕ ಮೊಹಮ್ಮದ್ ಅಶ್ರಫ್ ಮುಸ್ಲಿಯಾರ್ ಜಮಾಅತ್ ಕಾರ್ಯದರ್ಶಿ ಕೆ.ಎಮ್ ಮೂಸಾನ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಮ್ ಅಬ್ದುಲ್ ಮಜೀದ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್, ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್, ಜಮಾಅತ್ ನಿರ್ದೇಶಕರಾದ ಸಂಶುದ್ಧೀನ್ ಪೆಲ್ತಡ್ಕ, ಎ.ಹನೀಫ್, ಕೆ.ಎಂ ಮೊಯಿದು ಕುಕ್ಕುಂಬಳ, ಮುಜೀಬ್ ಮೊದಲಾದವರು ಉಪಸ್ಥಿರಿದ್ದರು. ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.