-ಕು.ನಿರೀಕ್ಷಾ ಸುಲಾಯ ಸುಳ್ಯ
ಕಣ್ಣಿಗೆ ಕಾಣುವ ನಡೆದಾಡುವ ದೇವರು..
ಚೆನ್ನಾಗಿಟ್ಟಿರಲಿ ನಿನ್ನ ದೇವಿ ಭಗವತೀ..
ಒಂಬತ್ತು ತಿಂಗಳ ನಿನ್ನ ಈ ಕಷ್ಟ
ನಿನ್ನಿಂದ ಆಯಿತು ನನ್ನ ಮುದ್ದು ಮಾತುಗಳು ಸ್ಪಷ್ಟ
ಮನೆಯೇ ಮೊದಲ ಪಾಠಶಾಲೆ ಆಗುವುದು
ನಿನ್ನ ಸಲಹೆ ಇಲ್ಲದೆ ನಮ್ಮ ಬದುಕು ಮುಂದೆ ಸಾಗಲಾರದು
ನನ್ನ ಆಸೆ, ಆಕಾಂಕ್ಷೆಗಳಿಗೆ ಬೆನ್ನೆಲುಬಾಗಿ ನಿಂತು
ಸಂತೋಷದಾ ದಿನಗಳು ರಾರಾಜಿಸುತ್ತಾ ಬಂತು
ಎಲ್ಲರ ಬಾಳಿನಲ್ಲೂ ಪ್ರಮುಖ ಪಾತ್ರ ವಹಿಸಿ
ತನ್ನ ಎಲ್ಲಾ ಕಷ್ಟಕರ ದಿನಗಳನ್ನು ಸಹಿಸಿ
ಮುಂದೆ ಬರುವ ನನ್ನ ಜೀವನದ ಹಾದಿ
ಸಾಧಿಸಿಯೇ ಸಾಧಿಸುವೇ ಎನ್ನುವ ಹಠವಾದಿ
ನನ್ನ ಎಲ್ಲಾ ಸಂದರ್ಭದಲ್ಲಿ ಬೆಂಬಲಿಸಿ
ಸುಖ – ದುಃಖಗಳಲ್ಲಿ ಸಮಾನ ರೂಪದಲ್ಲಿ ಸ್ಪಂದಿಸಿ
ನಿನ್ನ ದಿನಗಳು ಸುಖಕರವಾಗಿ ಇರಲಿ
ನೀನು ಅಪೇಕ್ಷಿಸಿದೆಲ್ಲವು ನಿನ್ನ ಬದುಕಲ್ಲಿ ಬರಲಿ
ನಿನ್ನ ನಾಮವನ್ನು ನಿಮಿಷ – ನಿಮಿಷವು ಪಠಿಸಿ
ಎಲ್ಲಾ ಒಳ್ಳೆಯದಾಗಲಿ ಎಂದು ನೀ ಹರಿಸಿ
ಎಲ್ಲರ ಮನದಲ್ಲೂ ತಾಯಿಗೆ ವಿಶಿಷ್ಟ ಸ್ಥಾನ
ತನ್ನ ತಾಯಿ ಎಂದರೇ ಎಲ್ಲರಿಗೂ ಪ್ರಾಣ
ನಿನ್ನನ್ನೇ ಪ್ರತಿದಿನ ನೂರು ಬಾರಿ ಸ್ಮರಿಸಿ
ಜೀವನದ ಸರಿ – ತಪ್ಪುಗಳ ಬಗ್ಗೆ ಕಣ್‌ತೆರೆಸಿ
ನೀನು ಇಲ್ಲದ ಬದುಕು ಆಗುತ್ತದೆ ಶೂನ್ಯ
ನಿನ್ನನ್ನು ವರ್ಣಿಸಲು ಸಾಧ್ಯವೇಯಾವುದಾದರೂ ಕಾವ್ಯ
ಕು.ನಿರೀಕ್ಷಾ ಸುಲಾಯ ಸುಳ್ಯ