ಪುಳಿಕುಕ್ಕು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸರೋಜಿನಿ ನಿವೃತ್ತಿ

0


ಎಡಮಂಗಲ ಗ್ರಾಮದ ಪುಳಿಕುಕ್ಕು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಸರೋಜಿನಿ ಎ.30ರಂದು ನಿವೃತ್ತರಾದರು.
2001ರಲ್ಲಿ ಕಾರ್ಯಕರ್ತೆ ಪುಳಿಕುಕ್ಕು ಅಂಗನವಾಡಿಗೆ ಸೇರಿದ ಅವರು 23ವರ್ಷ ಒಂದೇ ಅಂಗನವಾಡಿಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಉತ್ತಮ ಸೇವೆಗಾಗಿ ಪ್ರಣವ ಫೌಂಡೇಶನ್ ವತಿಯಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿರುತ್ತಾರೆ.
ಎಡಮಂಗಲದ ಕೊಡಂಗೆಯಲ್ಲಿ ವಾಸ ಮಾಡುತ್ತಿದ್ದಾರೆ‌. ಇವರ ಪತಿ ಶೀನಪ್ಪ.