ಚೊಕ್ಕಾಡಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದಿಂದ ಎಸ್.ಎಸ್.ಎಲ್‌.ಸಿ ಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ

0

ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ 2023-24ನೇ ಸಾಲಿನ ಎಸ್.ಎಸ್‌ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಶಾಲೆಯ ವಿದ್ಯಾರ್ಥಿನಿ ಕು.ರೇಣುಕಾ
ಶೇ. 93.12 ಅಂಕಗಳೊಂದಿಗೆ ಪ್ರಥಮ ಸ್ಥಾನಿಗೆ ರೂ.5 ಸಾವಿರ, ಶೇ 88.96 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದ ಕು.ದೀಪ್ತಿ.ಪಿ ರೂ. 3 ಸಾವಿರ, ಶೇ 88.16 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ ಕು.ಶ್ರೀಹಸ್ತಾ .ಕೆ.ಎಸ್ ರೂ. 2 ಸಾವಿರ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೇಜಸ್ವಿ ಕಡಪಳ , ಕಾರ್ಯದರ್ಶಿ ಮುರಳಿ ನಳಿಯಾರು, ಕೋಶಾಧಿಕಾರಿ ನಿರಂಜನ ಕೋಡ್ತುಗುಳಿ, ನಿರ್ದೇಶಕರಾದ ಉಮೇಶ್ ಚಿಲ್ಪಾರು,ಅನಿಲ್ ಪೂಜಾರಿಮನೆ ಹಾಗೂ ವೆಂಕಟ್ರಮಣ ಇಟ್ಟಿಗುಂಡಿ ಉಪಸ್ಥಿತರಿದ್ದರು.