ಈಶ್ವರಮಂಗಲದ ಮಧುರಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಶಿಕ್ಷಕರ ತರಬೇತಿ ಕಾರ್ಯಾಗಾರ

0

ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯದ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನ ನಿರ್ದೇಶಕಿ ಗೀತಾಂಜಲಿ ಟಿ.ಜಿ. ಭಾಗಿ

ಪುತ್ತೂರು ತಾ.ಈಶ್ವರಮಂಗಲದ ಮೇನಾಲ ಮಧುರಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 2 ದಿನಗಳ ಕಾಲ ಶಿಕ್ಷಕರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಮೊಂಟೆಸ್ಸರಿ ಸ್ಕೂಲ್‌ನ ನಿರ್ದೇಶಕಿ ಶ್ರೀಮತಿ ಗೀತಾಂಜಲಿ ಟಿ.ಜಿ. ಭಾಗವಹಿಸಿ ಶಿಕ್ಷಕರಿಗೆ ಕ್ಲಾಸ್ ರೂಮ್ ಮ್ಯಾನೇಜ್ಮೆಂಟ್ ಬೋಧನ ತಂತ್ರಗಳು, ಸಂವಹನ ಕೌಶಲ್ಯ ಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.

ಒಟ್ಟು 15ಶಿಕ್ಷಕರು ಭಾಗವಹಿಸಿ ಈ ಕಾರ್ಯಗಾರದ ಪ್ರಯೋಜನ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಗೀತಾಂಜಲಿಯವರನ್ನು ಸ್ಕೂಲ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.