ಆಲೆಟ್ಟಿ ಪೇಟೆಯಿಂದ ಪಯಸ್ವಿನಿ ನದಿಗೆ ಸದಾಶಿವ ದೇವರು ಜಳಕಕ್ಕೆ ಸಂಚರಿಸುವ ಕೆಳಗಿನ ಆಲೆಟ್ಟಿ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು ಮುಂದಿನ 28 ದಿನಗಳವರೆಗೆ ವಾಹನ ಸಂಚಾರ ಸಂಪೂರ್ಣ ವಾಗಿ ನಿಷೇಧಿಸಲಾಗಿದೆ.
ಮಾಜಿ ಸಚಿವ ಎಸ್.ಅಂಗಾರ ರವರ ಶಿಫಾರಸ್ಸಿನ ಮೇರೆಗೆ ಪ್ರಧಾನ ಮಂತ್ರಿ
ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಕೆ.ಆರ್.ಆರ್.ಡಿ.ಎ. ಅನುದಾನ ರೂ.50 ಲಕ್ಷದಲ್ಲಿ ಸುಮಾರು 530 ಮೀಟರ್ ನಷ್ಟು ಉದ್ದದ ಹಾಗೂ 3.5 ಮೀಟರ್ ನಷ್ಟು ಅಗಲದ ರಸ್ತೆಯು ಕಾಂಕ್ರೀಟಿಕರಣಗೊಳ್ಳುತ್ತಿದೆ. ಈಗಾಗಲೇ ಕಾಂಕ್ರೀಟ್ ಕಾಮಗಾರಿ ಕೆಲಸ ಅಂತಿಮ ಹಂತದಲ್ಲಿ ಭರದಿಂದ ನಡೆಯುತ್ತಿದ್ದು ಇಂದಿನಿಂದ
ಕೆಳಗಿನ ಆಲೆಟ್ಟಿ, ನೂಜಿನಮೂಲೆ, ಗಡಿಪಣೆ ,ಕೂಟೇಲು ಭಾಗಕ್ಕೆ ಹೋಗುವ ವಾಹನ ಸವಾರರು ಮುಂದಿನ 28 ದಿನಗಳ ಕಾಲ ಕ್ಯೂರಿಂಗ್ ಸಮಯದಲ್ಲಿ ಪಾದಯಾತ್ರೆ ಮಾಡಬೇಕಾಗಿದೆ.
ಕಾಮಗಾರಿ ಕೆಲಸದ ನಿರ್ವಹಣೆಯನ್ನು ಇಲಾಖೆಯ ಇಂಜಿನಿಯರ್ ಪರಮೇಶ್ವರ ನಾಯ್ಕ್, ರವಿಚಂದ್ರ ಪೆರಾಜೆ ಹಾಗೂ ಗುತ್ತಿಗೆದಾರ ರಾಜೀವ್ ಶೆಟ್ಟಿ ಕುಂದಾಪುರ ರವರು ನಿರ್ವಹಿಸುತ್ತಿದ್ದಾರೆ.