ಮಾಣಿ – ಮೈಸೂರು ಹೆದ್ದಾರಿಯ ಪೈಚಾರಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭಗೊಂಡಿದೆ.
ಮಾಣಿ – ಮೈಸೂರು ಹೆದ್ದಾರಿ ಚತುಷ್ಪಥಗೊಳ್ಳುವ ಹಿನ್ನೆಲೆಯಲ್ಲಿ ಸುಳ್ಯದ ಪೈಚಾರಿನಲ್ಲಿ ಕಾಮಗಾರಿ ಹಂತದಲ್ಲಿರುವ ಸೇತುವೆಯ ಬಳಿಯ ಅಂಗಡಿ ಮತ್ತು ಮನೆಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ತಂಡ ಮೇ 15ರಂದು ಭೇಟಿ ನೀಡಿ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟ ಜಾಗವನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರು.
ಇಂದು ರಸ್ತೆ ಕಾಮಗಾರಿ ಪ್ರಾರಂಭಗೊಂಡಿದ್ದು ಜೆಸಿಬಿ ಮೂಲಕ ಕೆಲಸ ನಡೆಯುತ್ತಿದೆ.