ಇಂದು ಭಕ್ತಿ ಪ್ರಧಾನವಾಗಿ ನಡೆದ ನಿಧಿಕುಂಭ ಸ್ಥಾಪನೆ, ಷಡಾಧಾರ ಪ್ರತಿಷ್ಟೆ
ರಾತ್ರಿ ಗರ್ಭನ್ಯಾಸ ಕಾರ್ಯಕ್ರಮ
ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಶ್ರೀ ಕಾವೂರು ಮಹಾವಿಷ್ಣು ದೇವ ವಗೈರೆ ಪಂಚಸ್ಥಾಪನೆಗಳಿಗೆ ಒಳಪಟ್ಟ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು, ಆ ಪ್ರಯುಕ್ತ ನಿಧಿಕುಂಭ ಸ್ಥಾಪನೆ ಹಾಗೂ ಷಡಾಧಾರ ಪ್ರತಿಷ್ಟೆ ಕಾರ್ಯಕ್ರಮಗಳು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಇಂದು ಭಕ್ತಿ ಪ್ರಧಾನವಾಗಿ ನಡೆಯಿತು.
ಭಕ್ತಾಧಿಗಳಿಗೆ ಚಿನ್ನ ಮತ್ತು ಬೆಳ್ಳಿಯನ್ನು ದೇವಾಲಯದಲ್ಲಿಯೇ ದೊರೆಯುವ ವ್ಯವಸ್ಥೆ ಮಾಡಲಾಗಿತ್ತು. ಊರ ಹಾಗೂ ಪರವೂರ ನೂರಾರು ಭಕ್ತರು ಆಗಮಿಸಿ ಸ್ವರ್ಣ ಮತ್ತು ಬೆಳ್ಳಿ ಯ ನಾಣ್ಯ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಕು| ಭಾಗೀರಥಿ ಮುರುಳ್ಯ, ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೊಳಿಕೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಸೇವಾ ಸಮಿತಿ ಅಧ್ಯಕ್ಷ ಕಮಲಾಕ್ಷ ಗೌಡ, ಅನ್ನಪೂರ್ಣ ಸಮಿತಿ ಅಧ್ಯಕ್ಷ ದಯಾನಂದ ಪುರ, ಭಜನಾ ಮಂಡಳಿ ಅಧ್ಯಕ್ಷ ಮಹೇಶ್ ಪುರ ಸೇರಿದಂತೆ ಸಮಿತಿಗಳ ಪದಾಧಿಕಾರಿಗಳು, ಪರ-ಊರ ಭಕ್ತರು ಉಪಸ್ಥಿತರಿದ್ದರು.
ಇಂದು ರಾತ್ರಿ ಗರ್ಭನ್ಯಾಸ ಕಾರ್ಯಕ್ರಮ ನಡೆಯಲಿದೆ.