ಅನಧಿಕೃತ ಅಂಗಡಿ ತೆರವಿಲ್ಲ, ಒಳಚರಂಡಿ ವ್ಯವಸ್ಥೆ ಸರಿಯಿಲ್ಲ, ದೇವಸ್ಥಾನ ಆನೆಯಿಂದ ಅಕ್ರಮವಾಗಿ ಹಣ
ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ ಆರೋಪ
ಸುಬ್ರಹ್ಮಣ್ಯದಲ್ಲಿ ಗಾಂಜಾ ಬೆಳೆದ ಆರೋಪಿಗಳನ್ನು ಬಂದಿಸಿಲ್ಲ. ಇದ್ದಕ್ಕೆ ಸುಬ್ರಹ್ಮಣ್ಯ ದೇವಸ್ಥಾನದವರು ಆಸಕ್ತಿ ತೋರಿಸಿಲ್ಲ ಎಂದು ಸುಬ್ರಹ್ಮಣ್ಯ ಕಾಂಗ್ರೆಸ್ ಆರೋಪಿಸಿದೆ. ಸುಬ್ರಹ್ಮಣ್ಯದಲ್ಲಿ ಅನಧಿಕೃತ ಅಂಗಡಿ ತೆರವಿಗೆ, ಒಳಚರಂಡಿ ವ್ಯವಸ್ಥೆಗೆ, ಆನೆಯ ಸುವ್ಯವಸ್ಥೆ ಗೆ ದೇವಸ್ಥಾನದಿಂದ ಸ್ಪಂದನೆಯಿಲ್ಲಾ ಎಂದು ಸುಬ್ರಹ್ಮಣ್ದಲ್ಲಿ ಮೇ.23 ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದೆ.
ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವರಾಮ ರೈ ಸುಬ್ರಹ್ಮಣ್ಯದಲ್ಲಿ ಪೇಟೆಯಲ್ಲಿ ಹಲವು ಅನಧಿಕೃತ ಅಂಗಡಿಗಳಿದ್ದು ತೆರವು ಕಾರ್ಯ ಮಾಡಿಸುತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗೆ ನಾವು ಪತ್ರ ಬರೆದಿದ್ದೇವೆ. ಡಿ.ಸಿ ಯವರು ಅನಧಿಕೃತ ಅಂಗಡು ತೆರವಿಗೆ ಆದೇಶ ಮಾಡಿದ್ದಾರೆ. ಆದರೆ ಇಲ್ಲಿನ ಆರ್ . ಐ ಅವರು ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ರಿಪೋರ್ಟ್ ಹಾಕಿರುವುದಾಗಿ ತಿಳಿದು ಬಂದಿದೆ. ಹಾಗಿದ್ದರೆ ತೆರವು ಮಾಡುವವರು ಯಾರೂ ಎಂದು ಪ್ರಶ್ನಿಸಿದ್ದಾರೆ.
ಸುಬ್ರಹ್ಮಣ್ಯ ದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಖಾಸಗಿ ಸಂಸ್ಥೆಗಳು ಒಳಚರಂಡಿಗೆ ನೇರ ಸಂಪರ್ಕ ಕೊಡುತ್ತದೆ. ದೇವಸ್ಥಾನದಲ್ಲಿ ಇಂಜಿನಿಯರಿಂಗ್ ಸೆಕ್ಷನ್ ಇದ್ದರೂ ಆ ಬಗ್ಗೆ ಗಮನ ಹರಿಸುತಿಲ್ಲ.ಒಳಚರಂಡಿಯಿಂದ ಸಂಪರ್ಕ ಪಡೆದವರಿಂದ ಶುಲ್ಕ ಸಂಗ್ರಹಿಸದ ಕಾರಣ ದೇವಸ್ಥಾನಕ್ಕೆ ನಷ್ಟ . ಇಲ್ಲಿನ ತಪ್ಪಿಸ್ಥಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆನೆಯಿಂದ ಹಣ ಸಂಗ್ರಹ ಮಾಡುತಿದ್ದಾರೆ ಎಂದು ಆರೋಸಿದ ಶಿವರಾಮ ರೈವರು.
ಆನೆ ದೇವಸ್ಥಾನಕ್ಕೆ ಬಂದು ಮಾವುತರು ಅಲ್ಲಿ ಹಣ ಸಂಗ್ರಹಿಸಲು ಇಲ್ಲ. ಆದರೂ ಆನೆಯನ್ಙು ದೇವಸ್ಥಾನದ ಕರೆದು ಕೊಂಡು ಬರ್ತಾರೆ. ಆನೆಗೆ ಗಾಯವಾದಾಗ ಸಿಬ್ಬಂದಿಗಳು ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಗಮನಕ್ಕೆ ತರವುದಿಲ್ಲ ಯಾಕೆ. ಆನೆ ಆರೋಗ್ಯವಾಗಿದೆ ಇದರಲ್ಲಿ ಎರಡು ಮಾತಿಲ್ಲ. ಆದರೂ ಹಣ ಸಂಗ್ರಹದಿಂದ ಆನೆಯ ಸೊಂಡಿಲಿಗೆ ಸುಸ್ತಾಗುತ್ತಿದೆ. ಮಾವುತರು ಪೈಬರ್ ಅಂಕುಶ ಹಾಕುವುದನ್ನು ಬಿಟ್ಟು ಕಬ್ಬಿಣ ಅಂಕುಶ ಬಳಸುತಿದ್ದಾರೆ ಇದು ಸರಿಯಲ್ಲ. ಶಿವಮೊಗ್ಗದ ವೈದ್ಯಾಧಿಕಾರಿ ಸುಬ್ರಹ್ಮಣ್ಯದ ಆನೆಗೆ ಅಗತ್ಯವಿಲ್ಲ, ವೈದ್ಯಾಧಿಕಾರಿ ಬದಲಿಸಭೇಕು. ಆನೆ ಮಾವುತರ ಹೊಸ ನೇಮಕಾತಿ ಮಾಡಬೇಕೆಂದು ಆಗ್ರಹಿಸಿದರು.
ಈ ಬಗ್ಗೆ ಏನು ಕ್ರಮ ಕೈಗೊಳ್ಳದಿದ್ದರೆ ಅರಣ್ಯ ಕಛೇರಿ ಮುಂದೆ ಮತ್ತು ಪುತ್ತೂರು ಸಹಾಯಕ ಕಛೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಸುಬ್ರಹ್ಮಣ್ಯ ಕಾಂಗ್ರೆಸ್ ಸಮಿತಿ ಹೇಳಿಕೊಂಡಿದೆ. ಹರೀಶ್ ಇಂಜಾಡಿ, ಸುಬ್ರಹ್ಮಣ್ಯ ರಾವ್, ಕೃಷ್ಣಮೂರ್ತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.