ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ತಾಲೂಕಿನ ವಿಕಲಚೇತನರ ಗುರುತಿನ ಚೀಟಿ ನೀಡುವ ಮತ್ತು ರೀನಿವಲ್ ಮಾಡುವ ಕ್ಯಾಂಪ್ ನಡೆಯಿತು.
ತಾಲೂಕು ಪಂಚಾಯತ್ ನ ಎಂ.ಆರ್.ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ಯು.ಆರ್.ಡಬ್ಲ್ಯೂ ಪ್ರವೀಣ್ ನಾಯಕ್, ಇತರ ಪಂಚಾಯತ್ ಗಳ ವಿ.ಆರ್.ಡಬ್ಲ್ಯೂ ರವರಾದ ದಿನೇಶ್, ಸವಿತಾ, ಹರಿಣಿ, ಸದಾನಂದ, ವೆಂಕಟ್ರಮಣ, ಹರ್ಷಿತ್, ಷಣ್ಮುಖ, ವರುಣ್, ಪುಷ್ಪಶ್ರೀ ಮತ್ತು, ಸಿಸ್ಟರ್ ನಯನ ಹಾಜರಿದ್ದರು.
ತಜ್ಞ ವೈದ್ಯಾಧಿಕಾರಿಗಳು ಈ ವೇಳೆ ಹಾಜರಿದ್ದು ಸಹಕಾರ ನೀಡಿದರು.
ಹಲವಾರು ವಿಶೇಷ ಚೇತನರು ಇದರ ಪ್ರಯೋಜನ ಪಡೆದುಕೊಂಡರು.