ಸುಳ್ಯದಲ್ಲಿ ಯಕ್ಷಗಾನ ತರಬೇತಿ ಪುನರಾರಂಭ

0

ಶ್ರೀ ಭುವನೇಶ್ವರೀ ಯಕ್ಷಗಾನ ಕಲಾ ಮಂಡಳಿಯ ೪೩ನೇ ವರ್ಷದ ಯಕ್ಷಗಾನ ತರಬೇತಿ ಮೇ.೨೬ರಂದು ಆರಂಭಗೊಂಡಿತು. ಉದ್ಘಾಟನೆಯನ್ನು ಆರೋಗ್ಯ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನಿವೃತ್ತರಾಗಿರುವ ಯಕ್ಷಗಾನ ಪರಂಪರೆಯ ಭಾಗವತರೂ ಆದ ಪದ್ಮನಾಭ ಭಟ್ ಉದ್ಘಾಟಿಸಿ ಶುಭ ಹಾರೈಸಿದರು. ಸಂಚಾಲಕ , ಶಿಕ್ಷಕ ಕೋಡ್ಲ ಗಣಪತಿ ಭಟ್ ಸ್ವಾಗತಿಸಿ , ವಂದನಾರ್ಪಣೆಗೈದರು. ಯಕ್ಷಗಾನ ತರಬೇತಿ ಪ್ರತಿ ಭಾನುವಾರ ೯:೩೦ ರಿಂದ ನಡೆಯಲಿದ್ದು, ಶ್ರೀ ಚೆನ್ನಕೇಶವ ದೇವಳದ ರಾಜಗೋಪುರದಲ್ಲಿ ನಡೆಯಲಿದೆ.