ಪಂಜದಲ್ಲಿ ಲಯನ್ಸ್ ಭವನ ಲೋಕಾರ್ಪಣೆ

0

ಪಂಜ ಲಯನ್ಸ್ ಕ್ಲಬ್ ನ ಕನಸು ನನಸಾದ ಅವಿಸ್ಮರಣೀಯ ಕ್ಷಣ – ಡಾ. ಮೆಲ್ವಿನ್ ಡಿ’ಸೋಜ

ಲಯನ್ಸ್ ಕ್ಲಬ್ ಪಂಜ , ಲಯನ್ಸ್ ಸೇವಾ ಟ್ರಸ್ಟ್( ರಿ) ಪಂಜ ವತಿಯಿಂದ ನಿರ್ಮಾಣ ಗೊಂಡಿರುವ ಶ್ರೀಮತಿ ದಿ.ಅಮ್ಮಕ್ಕ ಮತ್ತು ದಿ.ಮರಿಯಣ್ಣ ಗೌಡ ಬಿಳಿಮಲೆ ಸ್ಮರಣಾರ್ಥ ಲಯನ್ಸ್ ಭವನ ಇದರ ಉದ್ಘಾಟನಾ ಸಮಾರಂಭ ಇಂದು ನಡೆಯಿತು.

ಲಯನ್ಸ್ ಜಿಲ್ಲೆ 317 ಡಿ ರಾಜ್ಯಪಾಲ PMJF ಡಾ. ಮೆಲ್ವಿನ್ ಡಿ’ಸೋಜ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ದಿ.ಚಿದಾನಂದ ಬಿಳಿಮಲೆಯವರು ಸಂಸ್ಥೆಯ ಮೇಲಿನ ಪ್ರೀತಿಯಿಂದ ಖುಷಿಯಿಂದ ಲಯನ್ಸ್ ಭವನಕ್ಕೆ ಸ್ಥಳದಾನ ಮಾಡಿದ್ದಾರೆ. ಅವರ ಈ ಸ್ಥಳ ದಾನದಿಂದ ಅವರ ಮತ್ತು ಅವರ ಮನೆಯವರು ಹೆಸರು ಶಾಶ್ವತವಾಗಿ ಉಳಿಯುತ್ತದೆ. ಪಂಜ ಲಯನ್ಸ್ ಕ್ಲಬ್ ಸ್ವಂತ ಭವನ ನಿರ್ಮಾಣದ ಕನಸು ನನಸಾದ ಅವಿಸ್ಮರಣೀಯ ಕ್ಷಣ ಇದು” ಎಂದು ಹೇಳಿದರು.

ಲಯನ್ಸ್ ಜಿಲ್ಲೆ 317 ಡಿ
ಪೂರ್ವ ರಾಜ್ಯಪಾಲ PMJF
ಗೀತ ಪ್ರಕಾಶ್ ದಾನಿಗಳ ಫಲಕ ಅನಾವರಣ ಗೊಳಿಸಿ ಮಾತನಾಡಿ “ಒಳ್ಳೆಯ ಮನಸ್ಸಿನಿಂದ ಮಾಡುವ ಕೆಲಸಕ್ಕೆ ದೇವರಿದ್ದಾನೆ. ಕಷ್ಟಗಳಿದ್ದರೆ ಸಾಧನೆ ಮಾಡಲು ಅನುಕೂಲ” ಎಂದು ಹೇಳಿದರು.

ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ನಿಕಟಪೂರ್ವಾಧ್ಯಕ್ಷ PMJF ವಸಂತ ಶೆಟ್ಟಿ ನಾಮಫಲಕ ಅನಾವರಣ ಗೊಳಿಸಿದರು.

ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಸಭಾಧ್ಯಕ್ಷತೆ ವಹಿಸಿದ್ದರು.

ಸ್ಥಳ ದಾನಿಗಳಾದ ಶ್ರೀಮತಿ ಯಶೋಧ ಚಿದಾನಂದ ಬಿಳಿಮಲೆಯವರನ್ನು ಸನ್ಮಾನಿಸಲಾಯಿತು. ಅವರನ್ನು ಲಯನ್ಸ್ ಜಿಲ್ಲೆ 317 ಡಿ ಪೂರ್ವ ರಾಜ್ಯಪಾಲ MJF ಎಂ. ಬಿ. ಸದಾಶಿವ ಸನ್ಮಾನಿಸಿದರು.
ಬಳಿಕ ಮಾತನಾಡಿದ ಸದಾಶಿವರು,
“ಚಿದಾನಂದರ ದಾರಿಯನ್ನು, ತ್ಯಾಗವನ್ನು, ಹೃದಯ ವೈಶಾಲ್ಯತೆಯನ್ನು ನೆನಪಿಸುವ ಕಾರ್ಯ ಅವರ ಪತ್ನಿ ಮತ್ತು ಮಕ್ಕಳು ಮಾಡಿದ್ದಾರೆ. “ಭಕ್ತಿಯ ಬೆಳಕು ಸತ್ಯದ ಹಾದಿ” ಎಂಬ ನೀತಿ ವಾಕ್ಯ ಎಲ್ಲರು ಮೈಗೂಡಿಸಿಕೊಳ್ಳಲಿ.” ಎಂದು ಹೇಳಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ವಿಜಯಲಕ್ಷ್ಮಿ ಜಳಕದಹೊಳೆ,
ಪ್ರಾಂತೀಯ ಅಧ್ಯಕ್ಷೆ MJF ರೇಣುಕಾ ಸದಾನಂದ ಜಾಕೆ , ಕ್ಯಾಬಿನೆಟ್ ಖಜಾಂಜಿ ಸುಧಾಕರ ಶೆಟ್ಟಿ, ಪಂಜ ಲಯನ್ಸ್ ಕ್ಲಬ್ ನ ನಿಕಟ ಪೂರ್ವಾಧ್ಯಕ್ಷ ಪುರುಷೋತ್ತಮ ದಂಬೆಕೋಡಿ, ಪಂಜ ಲಯನ್ಸ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಾಧವ ಗೌಡ ಜಾಕೆ, ಕಟ್ಟಡ ರಚನಾ ಸಮಿತಿ ಅಧ್ಯಕ್ಷ ಸಂತೋಷ್ ಜಾಕೆ
ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಭವನ ನಿರ್ಮಾಣದ ಕಾಮಗಾರಿಯ ಗುತ್ತಿಗೆದಾರ ಶಬಿರ್ ಯಂ ಯಸ್ ಬಾಳಿಲ, ಇಂಜಿನಿಯರ್ ರಾಮಣ್ಣ ನಾಯ್ಕ ಹಾಗೂ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಟ್ಟಡ ರಚನಾ ಸಮಿತಿ ಅಧ್ಯಕ್ಷ ಸಂತೋಷ್ ಜಾಕೆ ಸ್ವಾಗತಿಸಿದರು. ಶ್ರೀಮತಿ ರಶ್ಮಿ ಪಳಂಗಾಯ, ಶ್ರೀಮತಿ ಸುಶ್ಮಿತಾ ಜಾಕೆ, ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಆಶಯ ಗೀತೆ ಹಾಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ ಪ್ರಾರ್ಥಿಸಿದರು. ಮೋಹನ್ ಕೂಟಾಜೆ ಲಯನ್ಸ್ ಧ್ವಜ ವಂದನೆ ಮಾಡಿದರು. ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಕ್ಲಬ್ ನ ನಿಯೋಜಿತ ಅಧ್ಯಕ್ಷ ಶಶಿಧರ ಪಳಂಗಾಯ ನಿರೂಪಿಸಿದರು. ಟ್ರಸ್ಟ್ ನ ಅಧ್ಯಕ್ಷ ಮಾಧವ ಗೌಡ ಜಾಕೆ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ ನ ಕೋಶಾಧಿಕಾರಿ ತುಕಾರಾಮ್ ಏನೆಕಲ್ಲು ವಂದಿಸಿದರು.