ಗಾಂಧಿನಗರ ಕೆಪಿಎಸ್ ಶಾಲೆಯಲ್ಲಿ ಸರಕಾರದ ಅನುದಾನದಿಂದ ರಚಿಸಿದ ಸುಸಜ್ಜಿತ ಗಣಕಯಂತ್ರ ವಿಭಾಗದ ಉದ್ಘಾಟನೆ ಹಾಗೂ ಕೋಟೆ ಫೌಂಡೇಶನ್ ವತಿಯಿಂದ ಕೊಡಮಾಡುವ ಡೆಸ್ಕ್ ಮತ್ತು ಬೆಂಚುಗಳನ್ನು ನೀಡುವುದು ಹಾಗೂ ೨೦೨೩-೨೦೨೪ರಲ್ಲಿ ಹತ್ತನೆ ತರಗತಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮ ನಡೆಯಿತು.
ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಹಿಂದಿನ ಕಾಲದಲ್ಲಿ ಶಿಕ್ಷಣ ಜೊತೆಯಲ್ಲಿ ಶಿಕ್ಷೆ ಕೂಡ ಇತ್ತು ಅದರೆ ಈಗ ಕೇವಲ ಶಿಕ್ಷಣ ಮಾತ್ರ ನೀಡಲಾಗುತ್ತದೆ. ಇದರಿಂದಾಗಿ ಶಾಲೆ ಬಿಡುವವರ ಸಂಖ್ಯೆ ಕಡಿಮೆಯಾಗಿ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಆಗಿದೆ. ಹಾಗಾಗಿ ಈ ಶಾಲೆ ಇಂದು ಶೇ. ೧೦೦ ಫಲಿತಾಂಶವನ್ನು ಪಡೆಯುವಂತೆ ಆಯಿತು. ಈ ಶಾಲೆಯಲ್ಲಿ ಕಲಿತು ಶಾಲೆಗೆ, ತಂದೆ ತಾಯಿಗೆ, ಶಿಕ್ಷಕರಿಗೆ ನೀವೂ ಒಳ್ಳೆಯ ಹೆಸರನ್ನು ತಂದಿದ್ದಿರಿ ಇನ್ನೂ ಮುಂದೆಯು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಿ ಮತ್ತು ಫಲಿತಾಂಶ ಬರುವುದಕ್ಕೆ ವಿಶೇಷ ಗಮನಹರಿಸಿದ ಶಿಕ್ಷಕರಿಗೆ ಅಭಿನಂದನೆಗಳು ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಧಿಕಾರಿ ರಮೇಶ್, ಕಾಲೇಜು ಪ್ರಾಂಶುಪಾಲರು, ಕೋಟೆ ಫೌಂಡೇಶನ್‌ನ ಮುಖ್ಯಸ್ಥ ಪ್ರದೀಪ್ ಹಾಗೂ ಸಂಸ್ಥೆಯ ವಿವಿಧ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.