ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿ
ಅರಂತೋಡು ಗ್ರಾಮಪಂಚಾಯತ್ ವ್ಯಾಪ್ತಿಯ ಬಹುಬೇಡಿಕೆಯ ರಸ್ತೆಯಾದ ಅರಂತೋಡು – ಅಂಗಡಿಮಜಲು ರಸ್ತೆ ಸೇರಿದಂತೆ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಜೂ.12ರಂದು ಉದ್ಘಾಟಿಸಿದರು.
ಅರಂತೋಡು ಗ್ರಾ.ಪಂ. ವ್ಯಾಪ್ತಿಯ ಕೊಡಂಕೇರಿ -ಉದಯನಗರ- ಬಂಡಡ್ಕ ರಸ್ತೆ , ಅರಂತೋಡು- ಕಲ್ಲುಗದ್ದೆ ರಸ್ತೆ , ಅರಂತೋಡು- ಅಂಗಡಿಮಜಲು ರಸ್ತೆ, ಆರಂತೋಡು ಬೋಳ್ತಜೆ -ಬನ ರಸ್ತೆ ಮತ್ತು ಪರ್ನೋಜಿ – ಚಾಂಬಾಡು ರಸ್ತೆ ಸೇರಿದಂತೆ ಒಟ್ಟು ಸುಮಾರು 62 ಲಕ್ಷ ರೂ.ಗಳ ಕಾಂಕ್ರಿಟೀಕರಣ ಕಾಮಗಾರಿಗಳ ರಸ್ತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ,ಅರಂತೋಡು – ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ತಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ಬಿಜೆಪಿ ಆಲೆಟ್ಟಿ ಮಹಾಶಕ್ತಿಕೇಂದ್ರದ ಅಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ, ನಿವೃತ್ತ ಶಿಕ್ಷಕ ತೀರ್ಥರಾಮ ಅಡ್ಕಬಳೆ, ಸುಳ್ಯ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ, ಮಾಜಿ ಜಿ.ಪಂ. ಸದಸ್ಯ ಸತೀಶ್ ನಾಯ್ಕ ಶುಂಠ್ಯಡ್ಕ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ, ಗ್ರಾ.ಪಂ. ಸದಸ್ಯರುಗಳಾದ ಗಂಗಾಧರ ಬನ, ಪುಷ್ಪರಾಜ್, ಶ್ರೀಮತಿ ಮಾಲಿನಿ ಉಳುವಾರು, ಶಿವಾನಂದ ಕುಕ್ಕುಂಬಳ, ವೇಣುಗೋಪಾಲ ಪೆತ್ತಾಜೆ, ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಶಂಕರ ಲಿಂಗಂ, ಕೃಷ್ಣಪ್ಪ ಪಾನತ್ತಿಲ, ಸಹಕಾರಿ ಸಂಘದ ನಿರ್ದೇಶಕರುಗಳಾದ ಕುಸುಮಾಧರ ಅಡ್ಕಬಳೆ, ವಿನೋದ್ ಉಳುವಾರು, ಶೇಖರ ಚೋಡಿಪಣೆ, ಸಹಕಾರಿ ಸಂಘದ ಮಾಜಿ ನಿರ್ದೇಶಕಿ ಶ್ರೀಮತಿ ವಾರಿಜ ಕುರುಂಜಿ, ಶ್ರೀಮತಿ ವಿಮಲ ಸೇರಿದಂತೆ ರಸ್ತೆ ಫಲಾನುಭವಿಗಳು ಉಪಸ್ಥಿತರಿದ್ದರು.