ಡಾ. ಬೀಜದ ಕಟ್ಟೆಯವರ ಮಾನವ ಸಂಪನ್ಮೂಲ ತಂಡದಿಂದ ವೃತ್ತಿ ಜೀವನದ ಇಪ್ಪತ್ತೈದು ವರ್ಷಗಳ ನೆನಪಿಗಾಗಿ ಇಪ್ಪತೈದು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಭರವಸೆ
ನನ್ನ ವೃತ್ತಿ ಜೀವನ ಯಶಸ್ವಿನ ಹಿಂದೆ ಸಹೋದ್ಯೋಗಿಗಳು ಶ್ರಮ : ಡಾ.ಬೀಜದಕಟ್ಟೆ
ಹಲವಾರು ಸಾಮಾಜಿಕ ಕಾಳಜಿಯೊಂದಿಗೆ ಸಾಹಿತಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಚತುರ, ಕನ್ನಡಪರ ಕಾರ್ಯಕ್ರಮ ಸಂಘಟಕರು, ಯುವ ಮಾನವ ಸಂಪನ್ಮೂಲ ಅಭಿವೃದ್ಧಿಯ ಸಾಧಕ, ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಾಹಿತ್ಯ ಸಮ್ಮೇಳನಗಳ ಸಂಘಟಕರಾದ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ)ಇದರ ಸ್ಥಾಪಕಾಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ಯವರ ಯಶಸ್ವಿ 25 ವರ್ಷಗಳ ವೃತ್ತಿಜೀವನದ ಬೆಳ್ಳಿ ಹಬ್ಬದ ಪ್ರಯುಕ್ತ ತನ್ನ ತಂಡದ ಸಹೋದ್ಯೋಗಿ ಮಿತ್ರರರೊಂದಿಗೆ ಸ್ನೇಹ ಸಮ್ಮಿಲನ ಮತ್ತು ಸಹೋದ್ಯೋಗಿ ಮಿತ್ರರನ್ನು ಗುರುತಿಸುವಿಕೆ ಕಾರ್ಯಕ್ರಮವು ಜೂ.11ರಂದು ಬೆಂಗಳೂರಿನ ಮಾರತಹಳ್ಳಿ ಯಲ್ಲಿರುವ ಹೋಟೆಲ್ ಇಂಪಿರಿಯೋ ದಲ್ಲಿ ನಡೆಯಿತು.
ಜೊತೆಗೂಡಿ ಕೆಲಸ ಮಾಡುವ ಸುಮಾರು 30ಕ್ಕೂ ಹೆಚ್ಚು ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದರು.
ಕಾರ್ಯಕ್ರಮದಲ್ಲಿ, ವೃತ್ತಿ ಜೀವನದಲ್ಲಿ ಸಹಕರಿಸಿದ ಗುರು ಹಿರಿಯರಿಗೆ ಮತ್ತು ಸಹೋದ್ಯೋಗಿಗಳಿಗೆ ಕೃತಜ್ಞತೆಗಳನ್ನ ಸಲ್ಲಿಸಿದರು ಗೌರವ ನೆನಪಿನ ಕಾಣಿಕೆ ನೀಡಿ ಗೌರವಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ ಬೀಜದಕಟ್ಟೆ ಯವರು “ಸಹೋದ್ಯೋಗಿಗಳು ಕುರಿತು ನನ್ನ ಇಪ್ಪತೈದು ವರ್ಷಗಳ ವೃತ್ತಿ ಜೀವನವು ಯಶಸ್ವಿಯಾಗಿ ನಡೆಯಲು ನನ್ನ ಸಹೋದ್ಯೋಗಿಗಳು ಮತ್ತು ನನ್ನ ಮಾರ್ಗದರ್ಶಕರೂ ತುಂಬಾ ಸಹಕಾರಿಯಾಗಿದ್ದಾರೆ ನನ್ನ ಸಹೋದ್ಯೋಗಿ ಮಿತ್ರರು ನಮ್ಮ ಮಾನವ ಸಂಪನ್ಮೂಲ ವಿಭಾಗದಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ವೃತ್ತಿ ನಿಷ್ಠೆಯಿಂದ ಕೆಲಸಮಾಡಿ ನನ್ನ ಜೊತೆ ಕೈಜೋಡಿಸಿದ್ದಾರೆ ಆದರಿಂದ ನನ್ನ ವೃತ್ತಿ ಜೀವನ ಇಪ್ಪತೈದು ವರ್ಷಗಳ ಕಾಲ ಯಶಸ್ವಿಯಾಗಿ ಮನ್ನಡೆಸಲು ಸಾಧ್ಯವಾಯಿತು ಎಂದರು”.
ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ಆರೀಶ್ ಪೇರಡ್ಕ ಸ್ವಾಗತಿಸಿ “ಡಾ.ಉಮ್ಮರ್ ಬೀಜದಕಟ್ಟೆ ಯವರ ನಲವತ್ತು ವರ್ಷಗಳ ಒಡನಾಡ ಬಗ್ಗೆ ಮಾತನಾಡಿ ಉಮ್ಮರ್ ವೃತ್ತಿ ಜೀವನದಲ್ಲಿ ತನ್ನ ವೃತ್ತಿಯೊಂದಿಗೆ ಇನ್ನೊಬ್ಬರ ವೃತ್ತಿ ಜೀವನದಲ್ಲಿ ತುಂಬಾ ಸಹಕಾರಿಯಾಗಿದ್ದರು ನನ್ನಂತಹ ಹಲವಾರು ಯವಕರಿಗೆ ಉದ್ಯೋಗ ಕೊಡಿಸಿ ನಮ್ಮ ವೃತ್ತಿ ಜೀವನದಲ್ಲಿ ಯಶಸ್ವಿ ಕಾರಣಕರ್ತರಾದ ಅಜಾತಶತ್ರುವಾಗಿ ಬೆಳದಿದ್ದಾರೆ ಎಂದರು”.
ಇನ್ನೊರ್ವ ಸಹೋದ್ಯೋಗಿ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಅಂಬರೀಶ್ ಮಾತನಾಡಿ”ಡಾ. ಉಮರ್ ಬೀಜದಕಟ್ಟೆಯವರು ಅಪರೂಪದ ವ್ಯಕ್ತಿತ್ವವನ್ನು ಹೊಂದಿರುವ ಅಸಾಧಾರಣ ಮಾನವೀಯ ವ್ಯಕ್ತಿ, ಅವರು ಪ್ರಾಮಾಣಿಕತೆ ಮತ್ತು ವಿನಮ್ರತೆಯ ರೂಪಕವಾಗಿದ್ದಾರೆ.
ಅವರೊಂದಿಗೆ ಕೆಲಸ ಮಾಡುವುದೆಂದರೆ ನನಗೆ ಒಂದು ಅದ್ಭುತ ಅನುಭವ. ಅವರು ಸಹಉದ್ಯೋಗಿಗಳ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಮತ್ತು ಪರಿಣಾಮಕಾರಿ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ತಂತ್ರಗಳನ್ನು ಜಾರಿಗೆ ತರುವಲ್ಲಿ ಅವರ ಅಚಂಚಲ ಸಮರ್ಪಣೆ ಅಮೂಲ್ಯವಾಗಿದೆ. ಅವರ ಕೊಡುಗೆಗಳು ಹೊಸ ಮಾನದಂಡಗಳನ್ನು ಸ್ಥಾಪಿಸಿ ಈ ಕ್ಷೇತ್ರದಲ್ಲಿ ಅನೇಕರಿಗೆ ಪ್ರೇರಣೆಯಾಗಿದ್ದರೆ ಎಂದರು.
ಮಾನವ ಸಂಪನ್ಮೂಲ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕರಾದ ಹೇಮಂತ್ ಪಟೇಲ್,ಚೆಲುವರಾಜು ರವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ವಿಭಾಗದ ಇಸಾಕ್,ರವಿಕುಮಾರ್ ಎನ್, ಶಶಾಂಕ್ ಸಿಂದಿಯಾ,ಶಿಲ್ಪಿ,ಮದು,ಪವನ್ ಕುಮಾರ್,ರಾಧಾಕೃಷ್ಣ ಟೋನಿ ಫ್ರಾಝರ್, ಶಂಕರ್ ಬಿ ದಿಸಾಲೆ, ರಕ್ಷಿತ್ ಬಿ ಇ,ಕೃಷ್ಣಮೂರ್ತಿ ಭರಾಕುಮಾರ್, ದೇವಿದಾಸ್,ಮೊಗೇರ್,ಅಂಬ್ರಿತ ಘೋಷ್, ಅರವಿಂದ್ ಎನ್,ಕಾರ್ತಿಕ್ ಕುಮಾರ್,ಎ ವಿ ನಾರಾಯಣ,ಶ್ರೀನಿವಾಸ್ ಎಂ,ಶಂಕರ್ ರಾಥೋಡ್ ಮೊದಲಾದವರು ಉಪಸ್ಥಿತರಿದ್ದರು.
ಮಾನವ ಸಂಪನ್ಮೂಲ ವಿಭಾಗದ ಅಯ್ಯೂಬ್ ಗೂನಡ್ಕ,ಮಂಜುನಾಥ್ ಹಿರಿಯೂರು,ಫೈಝಲ್ ಬೀಜದಕಟ್ಟೆ , ಮಾಝಿನ್ ಬೀಜದಕಟ್ಟೆ ಕಾರ್ಯಕ್ರಮ ಸಂಘಟಿಸಿದರು.