ಸುಳ್ಯ : ಜನತಾದಳ ಕಾರ್ಯಾಲಯದಲ್ಲಿ ಅಭಿನಂದನಾ ಸಭೆ

0

ಮುಂದಿನ ದಿನಗಳಲ್ಲಿ ಜಾತ್ಯಾತೀತ ಜನತಾದಳ ಬಲಿಷ್ಠವಾಗಲಿದೆ : ಸುಕುಮಾರ್ ಕೋಡ್ತುಗುಳಿ

ಲೋಕಸಭಾ ಚುನಾವಣೆಯಲ್ಲಿ ಎನ್ . ಡಿ. ಎ ಮೈತ್ರಿ ಅಭ್ಯರ್ಥಿ ಜನತಾದಳದ ಮುಖಂಡ ಹೆಚ್. ಡಿ ಕುಮಾರ ಸ್ವಾಮಿ ಸಚಿವರಾದ ಹಿನ್ನಲೆ ಸುಳ್ಯ ತಾಲೂಕು ಜನತಾದಳ ಕಾರ್ಯಾಲಯದಲ್ಲಿ ಕಾರ್ಯಕರ್ತರಿಂದ ಅಭಿನಂದನಾ ಸಭೆ ಕಾರ್ಯಕ್ರಮವು ಜೂ. 17 ರಂದು ನಡೆಯಿತು.

ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಜನತಾದಳದ ಅಧ್ಯಕ್ಷರಾದ ಸುಕುಮಾರ್ ಕೋಡ್ತು ಗುಳಿ ವಹಿಸಿದರು . ಬಳಿಕ ಮಾತನಾಡಿದ ಅವರು ಕೆಲವರು ಜನತಾ ದಳ ಮುಳುಗಿ ಹೋಗಿದೆ ಎಂದು ತಿಳಿದುಕೊಂಡಿದ್ದರು ಆದರೆ ಎನ್ ಡಿ. ಎ & ಜನತಾ ದಳಮೈತ್ರಿ ಕೂಟದೊಂದಿಗೆ ಭಾರತ ಸರಕಾರದ ಕೇಂದ್ರ ಸಚಿವ ಸಂಪುಟದಲ್ಲಿ ಹೆಚ್. ಡಿ ಕುಮಾರ ಸ್ವಾಮಿಗೆ ಸಚಿವ ಸ್ಥಾನ ಸಿಕ್ಕಿರುವುದು ಬಹಳ ಸಂತೋಷದ ವಿಷಯವಾಗಿದೆ . ಈ ವಿಜಯದ ಹಿನ್ನಲೆಯಲ್ಲಿ ಪ್ರತೀ ಜನತಾ ದಳದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನತಾ ದಳ ಪಾರ್ಟಿಯನ್ನು ಮೇಲಕ್ಕೆ ಎತ್ತಿದ್ದಾರೆ. ಅಲ್ಲದೆ ದಕ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರ ಪರವಾಗಿ ಜಿಲ್ಲೆ , ತಾಲೂಕು, ಗ್ರಾಮ ಗ್ರಾಮಗಳಲ್ಲಿ ಕಾರ್ಯಕರ್ತರು ಪ್ರಚಾರಕ್ಕೆ ಇಳಿದಿದ್ದಾರೆ. ಕರ್ನಾಟಕ ವಿಧಾನ ಪರಿಷತ್ ನೈರುತ್ಯ ಪಧವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಬಹುಮತದೊಂದಿಗೆ ಜಯಿಸಿದ ಅಭ್ಯರ್ಥಿಗಳಿಗೆ ಕೂಡಾ ಅಭಿನಂದನೆ ತಿಳಿಸಿದರು . ಇನ್ನೂ ಕೂಡಾ ಜನತಾ ದಳ ಒಗ್ಗಟ್ಟಿನಿಂದ ನಿಂತು ರೈತರಿಗೆ , ಬಡವರಿಗೆ ಪ್ರಯೋಜನವಾಗುವಂತಹ ಹೊಸ ಯೋಜನೆಗಳನ್ನು ತರುವನಿರೀಕ್ಷೆ ನಮ್ಮಲ್ಲಿದೆ .ಮುಂದಿನ ದಿನಗಳಲ್ಲಿ ಜನತಾದಳ ಸಂಘಟನೆಯಲ್ಲಿ ಹೆಚ್ಚಿನ ಕಾರ್ಯಕರ್ತರು ಸೇರ್ಪಡೆಯಾಗಿ ಬಲಿಷ್ಠವಾಗಲಿದೆ.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿ ಕಾನ, ತಾಲೂಕು ಉಪಾಧ್ಯಕ್ಷ ದೇವರಾಮ ಬಿ, ರೋಹನ್ ಪೀಟರ್ ಉಬರಡ್ಕ , ರಾಮ ಚಂದ್ರ ಬಳ್ಳಡ್ಕ , ಸುಳ್ಯ ತಾಲೂಕು ಎಸ್.ಸಿ, ಎಸ್. ಟಿ ಘಟಕ ಅಧ್ಯಕ್ಷ ಚೋಮ,ರೈತ ಸಂಘದ ಅಧ್ಯಕ್ಷ ಬಿ.ಸಿ ಲೋಲಜಾಕ್ಷ ಭೂತಕಲ್ಲು , ಸುಳ್ಯ ಯುವ ಜನತಾ ಮುಖಂಡ ನಿಹಾಲ್ ಎಸ್ .ಕೋಡ್ತು ಗುಳಿ , ಅಂಜನ್ ಮೂರ್ಜೆ, ಶ್ರೇಯಸ್ ಕುಕ್ಕುಜೆ, ಪ್ರಣಾಮ್ ಸಿ. ಬಿ ,ಮೊದಲಾದ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಕೇಶ್ ಕುಂಟಿಕಾನ ಸ್ವಾಗತಿಸಿ ವಂದಿಸಿದರು.