‘ಸಮಾಜ ಸೇವೆಯ ಮೂಲಕ ಇತರರಿಗೆ ನೆರವಾಗೋಣ -ಕುಡ್ಪಿ ಅರವಿಂದ ಶೆಣೈPMJF
ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜೂ. 16ರಂದು ಪೆರುವಾಜೆಯ ಜೆಡಿ ಆಡಿಟೋರಿಯಂನಲ್ಲಿ ಕ್ಲಬ್‌ನ ಅಧ್ಯಕ್ಷ ವಿಠಲ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ್ದ ಲಯನ್ ಜಿಲ್ಲಾ ಪ್ರಥಮ ಉಪ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈಯವರು ಪದಗ್ರಹಣ ನೆರವೇರಿಸಿ ಮಾತನಾಡುತ್ತಾ ‘ಲಯನ್ಸ್ ಕ್ಲಬ್‌ನ ಸದಸ್ಯರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಸಮಾಜದ ದುರ್ಬಲರಿಗೆ ಸಹಾಯ ಮಾಡಬೇಕು.
ನಾವು ಬೆಳೆಯುವುದರೊಂದಿಗೆ ಇತರರನ್ನೂ ಬೆಳೆಸಬೇಕು’ ಎಂದರು. ರಿಷನ್ ಚಯರ್ ಪರ್ಸನ್ ರೇಣುಕಾ ಸದಾನಂದ ಜಾಕೆ, ಝೋನ್ ಚಯರ್ ಪರ್ಸನ್ ಸಂತೋಷ್ ಜಾಕೆ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಮತಿ ಭವಾನಿ ವಿ. ಶೆಟ್ಟಿ ಲಯನ್ ಪ್ರೇಯರ್ ಮತ್ತು ರಕ್ಷಿತ್ ಪೆರುವಾಜೆ ಧ್ವಜವಂದನೆ ವಾಚಿಸಿದರು.
ನೂತನ ಅಧ್ಯಕ್ಷೆ ಶ್ರೀಮತಿ ಉಷಾ ಭಟ್ ಲಯನ್ ಕೋಡ್ ಆಫ್ ಎಥಿಕ್ಸ್ ವಾಚಿಸಿದರು. ಹೊಸತಾಗಿ ಸೇರ್ಪಡೆಗೊಂಡ ಸದಸ್ಯರನ್ನು ಚಂದ್ರಹಾಸ ರೈ ಪರಿಚಯಿಸಿದರು. ಗಣೇಶ್ ರೈ, ಶ್ರೀಮತಿ ಆಶಾ ಚಂದ್ರಹಾಸ ರೈ ಮತ್ತು ಯತೀಶ್ ಭಂಡಾರಿ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.
ನೂತನ ಕೋಶಾಧಿಕಾರಿ ಈಶ್ವರ ವಾರಣಾಶಿ ಕುಡ್ಪಿ ಅರವಿಂದ ಶೆಣೈಯವರನ್ನು ಪರಿಚಯಿಸಿದರು. ಜಯರಾಮ ರೈಯವರಿಗೆ ಎಂ.ಜೆ.ಎಫ್ ಫಲಕ ನೀಡಲಾಯಿತು. ಕ್ಲಬ್ ವತಿಯಿಂದ ಜೆಡಿ ಆಡಿಟೋರಿಯಂಗೆ ರೂ. 16 ಸಾವಿರ ಮೊತ್ತದ ಭಾಷಣ ಸ್ಟಾಂಡ್ (ರೋಸ್ಟ್ರಮ್)ನ್ನು ಕೊಡುಗೆಯಾಗಿ ನೀಡಲಾಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಯೊಬ್ಬರ ಕುಟುಂಬಕ್ಕೆ ಧನಸಹಾಯ ವಿತರಿಸಲಾಯಿತು. ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದ ಬಳಿಕ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಶ್ರೀಮತಿ ಉಷಾ ಬಿ ಭಟ್, ಕಾರ್ಯದರ್ಶಿ ಚೇತನ್ ಡಿ ಶೆಟ್ಟಿ ಮತ್ತು ಕೋಶಾಧಿಕಾರಿ ಈಶ್ವರ ವಾರಣಾಶಿಯವರಿಗೆ ಅಧಿಕಾರ ಹಸ್ತಾಂತರ ನಡೆಯಿತು. ಕುಡ್ಪಿ ಅರವಿಂದಶೆಣೈಯವರನ್ನು ಮತ್ತು ನಿರ್ಮಮನ ಅಧ್ಯಕ್ಷ ವಿಠಲ್ ಶೆಟ್ಟಿ ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ಲಬ್ ಗೆ ನೆರವಾದ ಹಲವು ಮಂದಿಗಳಿಗೆ ಸ್ಮರಣಿಕೆ ನೀಡಲಾಯಿತು. ಲಯನ್ಸ್ ಅಧ್ಯಕ್ಷ ವಿಠಲ್ ಶೆಟ್ಟಿ ಸ್ವಾಗತಿಸಿ ನೂತನ ಕಾರ್ಯದರ್ಶಿ ಚೇತನ್ ಡಿ. ಶೆಟ್ಟಿ ವಂದಿಸಿದರು. ಉಪನ್ಯಾಸಕ ಪದ್ಮನಾಭ ನೆಟ್ಟಾರು ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಲಯನ್ಸ್ ಕ್ಲಬ್‌ನ ಎಕ್ಸ್‌ಟೆನ್ಷನ್ ಚಯರ್ ಪರ್ಸನ್ ಆನಂದ ರೈ ಮಾರ್ಗದರ್ಶನ ನೀಡಿದರು.
ಕು. ಅನನ್ಯ ವಾರಣಾಶಿ, ಕು. ಧನ್ಯ ಪೆರುವಾಜೆ ಸಹಕಾರ ನೀಡಿದರು. ಕ್ಲಬ್ ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ರಾಷ್ಟ್ರಗೀತೆಯ ಬಳಿಕ ಸಹಭೋಜನ ನಡೆಯಿತು. ಜಿಲ್ಲೆ 317ಡಿ ಇದರ ವ್ಯಾಪ್ತಿಗೊಳಪಟ್ಟ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು, ಸದಸ್ಯರು, ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.