ಸುದ್ದಿ ನ್ಯೂಸ್ ಇಂಪ್ಯಾಕ್ಟ್

0


ಬೆಳ್ಳಾರೆ ಕೆಪಿಎಸ್ ಬಳಿಯ ವಿದ್ಯುತ್ ಲೈನಿನ ಮೇಲೆ ಇದ್ದ ಮರ, ಬಳ್ಳಿಗಳ ತೆರವು

ಬೆಳ್ಳಾರೆ ಕೆಪಿಎಸ್ ನೂತನ ಕಟ್ಟಡ ನಿರ್ಮಾಣವಾಗುತ್ತಿರುವ ಜಾಗದಲ್ಲಿ ಕಟ್ಟಡದ ಹಿಂಭಾಗದಲ್ಲಿ ಬಳ್ಳಿ, ಮರದ ಗೆಲ್ಲುಗಳು ವಿದ್ಯುತ್ ಲೈನಿನ ಮೇಲೆ ಬಿದ್ದಿತ್ತು. ಇದರ ಸಚಿತ್ರ ವರದಿ ಸುದ್ದಿ ವೆಬ್ಸೈಟ್ ನಲ್ಲಿ ಮಧ್ಯಾಹ್ನ ಪ್ರಕಟಗೊಂಡಿತ್ತು. ಇದನ್ನು ಅರಿತ ಇಲಾಖೆಯವರು ತಕ್ಷಣ ಸ್ಪಂದಿಸಿ ಸಂಜೆಯ ಒಳಗಾಗಿ ಲೈನನ್ನು ಸ್ವಚ್ಛಗೊಳಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಕಾರ್ಯನಿರ್ವಹಿಸಿದ ಇಲಾಖೆಯ ಕಾರ್ಯವೈಖರಿಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.