ಕ್ಯಾಂಪ್ಕೊ ಸಂಸ್ಥೆಯ ವತಿಯಿಂದ ಅಬೂಬಕರ್ ತೋಟತ್ತಿಲರ ಹೃದಯ ಶಸ್ತ್ರಕ್ರಿಯೆಗೆ ಸಹಾಯಧನ ಹಸ್ತಾಂತರ

0

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ  ಕ್ಯಾಂಪ್ಕೊ ಸುಳ್ಯ ಶಾಖೆಯ ಸದಸ್ಯರಾದ  ಅಬೂಬಕರ್ ತೋಟತ್ತಿಲ ಇವರ ತೆರೆದ ಹೃದಯ ಶಸ್ತ್ರಕ್ರಿಯೆಗೆ ಸಹಾಯಧನದ ಮೊತ್ತ ರೂ.200,000/- (ರೂಪಾಯಿ ಎರಡು ಲಕ್ಷ ) ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲರವರು 20 ರಂದು ಅಬೂಬಕರ್ ತೋಟತ್ತಿಲ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಶಾಖೆಯ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ್ ಶೆಟ್ಟಿ, ಸುಳ್ಯ ಶಾಖೆಯ ಪ್ರಬಂಧಕರಾದ ವಿನೋದ್ ಕುಮಾರ್ ಎ, ಸಂತೋಷ್ ಪಿ, ಸೀನಿಯರ್ ಮ್ಯಾನೇಜರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.