ಕಲ್ಲುಮುಟ್ಲು: ಮನೆಯ ಸಿಟೌಟ್ ಮೇಲೆ ಮರ ಬಿದ್ದು ಅಪಾರ ಹಾನಿ

0

ಸುಳ್ಯದ ಕಲ್ಲುಮುಟ್ಲು ಅಝೀಝ್ ಎಂಬುವರ ಮನೆಯ ಸಿಟೌಟ್ ಮೇಲೆ ಮರದ ಬೃಹತ್ ಕೊಂಬೆ ಬಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.
ನಿನ್ನೆ ತಡರಾತ್ರಿ ಅಝೀಝ್‌ರವರ ಪಕ್ಕದ ಮನೆಯಲ್ಲಿರುವ ಬೃಹತ್ ಮರದ ಕೊಂಬೆ ಮುರಿದು ಬಿದ್ದು, ಮನೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸಿಟೌಟ್‌ನ ೪ ಶೀಟ್, ಮನೆಯ ಮುಂಭಾಗ ಅಳವಡಿಸಲಾಗಿದ್ದ ನೀರಿನ ಸಿಂಟೆಕ್ಸ್ ಟ್ಯಾಂಕ್‌ಗೆ ಹಾನಿಯಾಗಿದೆ. ಸ್ಥಳಕ್ಕೆ ನಗರ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.