ಬೆಳ್ಳಾರೆ ಹಿದಾಯ ಪಬ್ಲಿಕ್ ಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0


ಬೆಳ್ಳಾರೆ ಹಿದಾಯ ಪಬ್ಲಿಕ್ ಸ್ಕೂಲ್, ವಿದ್ಯಾಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಆಚರಿಸಲಾಯಿತು.
‘ಉತ್ತಮ ಆರೋಗ್ಯಕ್ಕಾಗಿ ಯೋಗ’
ಯೋಗ ಎಂಬುದು ದೇಹದ ಲಯ, ಮನಸ್ಸಿನ ಮಧುರ ಆತ್ಮದ ಸಾಮರಸ್ಯ ಮತ್ತು ಜೀವನದ ಸ್ವರಮೇಳವಾಗಿದೆ.
ಯೋಗ ಅಭ್ಯಾಸವು ನಮ್ಮನ್ನು ಆರೋಗ್ಯಕರ ಮನಸ್ಸು, ದೇಹ ಮತ್ತು ಆತ್ಮಕ್ಕೆ ಶಾಂತಿಯನ್ನು ನೀಡಬಲ್ಲದು ಎಂದು ಶಾಲಾ ಮುಖ್ಯ ಶಿಕ್ಷಕಿ ಸುನೈನಾ ಬಿ ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾದ ಕುಮಾರಿ ಹೇಮಲತಾ ಇವರು ವಿದ್ಯಾರ್ಥಿಗಳಿಗೆ ಯೋಗಾಸನವನ್ನು ಅಭ್ಯಾಸ ಮಾಡಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರು ಶಾಲಾ ಮಕ್ಕಳು ಯೋಗಾಬ್ಯಾಸದಲ್ಲಿ ಪಾಲ್ಗೊಂಡರು