ಸವಣೂರಿನ ವಿದ್ಯಾರಶ್ಮಿಯಲ್ಲಿ ವಿದ್ಯಾರ್ಥಿಗಳಿಗೆ ಹದಿಹರೆಯದ ಮತ್ತು ಮಾನಸಿಕ ಗೊಂದಲಗಳ ನಿವಾರಣೆಗಾಗಿ ಮನೋವಿಶ್ಲೇಷಣಾ ಕಾರ್ಯಾಗಾರ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿಯವರು ಕಾರ್ಯಾಗಾರದ ಉಪಯುಕ್ತತೆಗಳ ಬಗ್ಗೆ ಮನದಟ್ಟು ಮಾಡಿದರು.
ಹುಡುಗರ ವಿಭಾಗವನ್ನು ಉದ್ದೇಶಿಸಿ ಮಾತನಾಡಲು ಸಂಪನ್ಮೂಲ ವ್ಯಕ್ತಿಯಾಗಿ ಪುರುಷರಕಟ್ಟೆಯ ಪ್ರಸಾದಿನೀ ಆಯುರ್ವೇದ ಕ್ಲಿನಿಕ್ ನ ವೈದ್ಯರಾದ ಡಾ. ರಾಘವೇಂದ್ರ ಪ್ರಸಾದ್ ಬಗಾರಡ್ಕ ಅವರು ಆಗಮಿಸಿದ್ದರು. ಹುಡುಗಿಯರ ಸಮಸ್ಯೆಗಳ ಪರಿಹಾರ ಮಾಡುವುದಕ್ಕಾಗಿ ಮನೋವಿಶ್ಲೇಷಣಾ ತಜ್ಞೆ ‘ನೆಮ್ಮದಿ’ ಮನೋಚಿಕಿತ್ಸಾ ಕೇಂದ್ರದ ಶ್ರೀಮತಿ ಶ್ರದ್ದಾ ರೈಯವರು ಆಗಮಿಸಿದ್ದರು.
ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎನ್ ಆಳ್ವ ಅವರು ಸರ್ವರನ್ನೂ ವಂದಿಸಿದರು.