ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಪಿ. ಸುಬ್ರಾಯ ಭಟ್ ಪಾದೆಕಲ್ಲು ನಿಧನ

0

ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಪಾದೆಕಲ್ಲು ಪಿ. ಸುಬ್ರಾಯ ಭಟ್ ರವರು ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು.

ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಇದ್ದ ಇವರು ಅರಂಬೂರಿನ ಸರಳಿಕುಂಜದಲ್ಲಿ ವಾಸವಿದ್ದರು. ಮೃತರ ಅಂತ್ಯಸಂಸ್ಕಾರ ಕಾರ್ಯಕ್ರಮ ನಾಳೆ ನಡೆಯಲಿರುವುದು.

ಮೃತರು ಪತ್ನಿ ಲಕ್ಷ್ಮೀ , ಪುತ್ರ. ನಾಗರಾಜ್ , ಪುತ್ರಿ ಮಾಲತಿ ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.