ನಾಗಮ್ಮ ಪಡ್ಪು ನಿಧನ

0

ದೇವಚಳ್ಳ ಗ್ರಾಮದ ದೇವ ಪಡ್ಪು ದಿ. ಆನಂದ ಗೌಡ ಎಂಬವರ ಪತ್ನಿ ನಾಗಮ್ಮ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ದೇವಚಳ್ಳ ಗ್ರಾ.ಪಂ.ಸದಸ್ಯ ರಮೇಶ್ ಪಡ್ಪು, ಪುತ್ರಿಯರಾದ ಲಲಿತ ದೇವರಾಜ್ ಚಿಕ್ಕಮಗಳೂರು, ಶಶಿ ಕಲಾ ತಿರುಮಲೇಶ್ವರ ಬೊಳ್ಳೂರು, ಹಿತಾಕ್ಷಿ ಚೆನ್ನಕೇಶವ ಚಿಕ್ಕಮಗಳೂರು, ಸುಮತಿ ಚಂದ್ರಶೇಖರ ಗಟ್ಟಿಗಾರು, ಜಯಶ್ರೀ ಕೇಶವ ಕರ್ಮಾಜೆ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.